ನೆಲಮಂಗಲ: ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿಕೃತಿ ಮೆರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸುತ್ತಿದ್ದ ಮುಖ್ಯ ಶಿಕ್ಷಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪದಡಿ ಮುಖ್ಯ ಶಿಕ್ಷಕ ಎಸ್.ರಂಗನಾಥ್ ನನ್ನ ಡಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377 ಹಾಗೂ ಜೀವ ಬೆದರಿಕೆ ಅಡಿ 506 ಆರೋಪದಡಿ ಪ್ರಕರಣ ಎಫ್ ಐಆರ್ ದಾಖಲಾಗಿದ್ದು, ಕೋವಿಡ್ ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ. ಮಾಗಡಿ ತಾಲೂಕಿನ ರಂಗನಾಥ್ 2009 ರಿಂದ 2010 ಶಾಲೆ ಮುಖ್ಯ ಶಿಕ್ಷಕನಾಗಿದ್ದ.
ಇತ್ತಿಚ್ಚೆಗಷ್ಟೆ ಊರಿಗೆ ಹೋದಾಗ ಘಟನೆ ಬಗ್ಗೆ ತಾಯಿಗೆ ಆ ಬಾಲಕ ತಿಳಿಸಿದ್ದ. ಬಳಿಕ ತಾಯಿ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು ಎನ್ನಲಾಗಿ ವಿಚಾರಣೆ ಬಳಿಕ ಆಂತರಕ ತನಿಖೆ ನಡೆಸಿದ್ದ ಶಾಲಾ ಆಡಳಿತ ಮಂಡಳಿ ರಂಗನಾಥ್ ಸಲಿಂಗ ಕಾಮದ ಕೃತ್ಯ ಆರೋಪ ಸಾಬೀತಾಗಿತ್ತು. ಕೂಡಲೇ ಡಾಬಸ್ ಪೇಟೆ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿ ಆರೋಪಿ ರಂಗನಾಥ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.