ಸಿಯೋಲ್: ಅನಾರೋಗ್ಯದಿಂದ ಬಳಲುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್ ಜಾಂಗ್ ಉನ್ ಈಗ ಕೋಮಾಗೆ ಜಾರಿದ್ದಾನೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರ ಹೇಳಿಕೆ ಆಧಾರಿಸಿ ‘ಕೊರಿಯಾ ಹೆರಾಲ್ಡ್’ ವರದಿ ಮಾಡಿದೆ.
ಕಿಮ್ ಜಾಂಗ್ ಮೃತಪಟ್ಟಿಲ್ಲ. ಸದ್ಯ ಈಗ ಉತ್ತರ ಕೊರಿಯಾದ ಆಡಳಿತವನ್ನು ಉನ್ ಸಹೋದರಿ ಕಿಮ್ ಯೊ ಜಾಂಗ್ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ದಕ್ಷಿಣ ಕೊರಿಯಾದ ಬೆಹುಗಾರಿಕಾ ಸಂಸ್ಥೆಯೂ ಉತ್ತರ ಕೊರಿಯಾದ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿರುವ ಮಾಹಿತಿ ನೀಡಿದೆ. ಕಿಮ್ ಕೋಮಾದಲ್ಲಿರುವ ಬಗ್ಗೆ ಇದೂವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ.
Advertisement
ಕಿಮ್ ಜಾಂಗ್ ಆರೋಗ್ಯದ ಬಗ್ಗೆ ವರದಿಯಾಗುವುದು ಇದೇ ಮೊದಲೆನಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಆತ ಸತ್ತಿದ್ದಾನೆ ಎಂದೇ ವರದಿಯಾಗಿತ್ತು. ಜಪಾನ್ ಮಾಧ್ಯಮಗಳ ವರದಿಯಿಂದ ಸಂಚಲನ ಸೃಷ್ಟಿಯಾಗಿತ್ತು.
Advertisement
ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಕಿಮ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆತ ಸಾವನ್ನಪ್ಪಿರಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಕಿಮ್ ಮೇ 2 ರಂದು ತನ್ನ ದೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಈ ಎಲ್ಲ ಗಾಳಿ ಸುದ್ದಿಗಳಿಗೂ ಬ್ರೇಕ್ ಹಾಕಿದ್ದ.
ದೇಶದಲ್ಲಿ ಆರಂಭವಾದ ನೂತನ ರಸಗೊಬ್ಬರ ಕಾರ್ಖಾನೆಯನ್ನು ಟೇಪ್ ಕತ್ತರಿಸುವ ಮೂಲಕ ಓಪನ್ ಮಾಡಿದ್ದ. ಈ ಕಾರ್ಯಕ್ರಮದ ನಂತರ ತಕ್ಷಣ ಆತನ ಫೋಟೋಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಿಮ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಈ ನಡುವೆ ಚೀನಾದಿಂದ ಉನ್ನತ ವೈದ್ಯರ ತಂಡ ಉತ್ತರ ಕೊರಿಯಾಗೆ ಹೋಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ‘ಕಿಮ್ ಜೀವಂತವಾಗಿದ್ದಾರೆ’ – ಉಪಗ್ರಹ ಚಿತ್ರ ಸಾಕ್ಷಿಯಂತೆ