ಬೆಂಗಳೂರು: ಡ್ರಗ್ ಮಾಫಿಯಾಗೂ ಚಿರಂಜೀವಿ ಸರ್ಜಾ ಸಾವಿಗೆ ಸಂಬಂಧ ಕಲ್ಪಿಸಿದ್ದಕ್ಕೆ ನಿರ್ಮಾಪಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಚಿರು ಕುಟುಂಬದವರಲ್ಲಿ ಕ್ಷಮೆ ಕೇಳಿದ್ದಾರೆ.
ಫಿಲ್ಮ್ ಚೇಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿರಂಜೀವಿ ಸರ್ಜಾ ಒಬ್ಬ ಯುವ ಪ್ರತಿಭಾವಂತ ಕಲಾವಿದ. ನನ್ನ ಹೇಳಿಕೆಯಿಂದ ಕುಟುಂಬದವರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
Advertisement
Advertisement
ಸಾರಾ ಗೋವಿಂದ್, ಉಮೇಶ್ ಬಣಕಾರ್ ಕಾಲ್ ಮಾಡಿದ್ದರು. ಇವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ಮೇಘನಾರಾಜ್ ಅವರು ಪತ್ರ ಬರೆದು ತುಂಬಾ ನೋವಾಗಿದೆ ಅಂತಾ ಹೇಳಿದ್ದಾರೆ. ಸುಂದರ್ ರಾಜ್ ಮತ್ತೆ ಅವರ ಪತ್ನಿ ನಾನು ಚಿಕ್ಕಮಗು ಇದ್ದಾಗ ಆಟ ಆಡಿಸಿದ್ದಾರೆ. ಅವರ ಮೇಲೆ ನನಗೆ ಗೌರವವಿದೆ. ಚಿರಂಜೀವಿ ಸರ್ಜಾ ಯುವ ನಟನಾಗಿದ್ದು ಉತ್ತಮ ಭವಿಷ್ಯ ಇತ್ತು. ಸಾವಿನ ಬಗ್ಗೆ ಸಂಶಯ ಬಂದ ಕಾರಣಕ್ಕೆ ನಾನು ಹೀಗೆ ಹೇಳಿದೆ. ಆದರೆ ಈಗ ಈ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದರು.
Advertisement
ಕೆಲವರು ಬಂದು ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಚಿತ್ರರಂಗದ ಒಬ್ಬರು ಅರೆಸ್ಟ್ ಆಗಿರುವುದು ನನಗೆ ನೋವಿದೆ. ಡ್ರಗ್ಸ್ ಮಾಫಿಯಾ ವಿರುದ್ಧ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸೆಲ್ಯೂಟ್ ಹೊಡೆಯಬೇಕು. ನನ್ನ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
Advertisement
ಸಾ.ರಾ ಗೋವಿಂದ್ ಮಾತನಾಡಿ, ಚಿತ್ರರಂಗದ ಕೊಳೆಯನ್ನು ತೊಳೆಯುವಂತಹ ಕೆಲಸ ಮಾಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೇಘನಾರಾಜ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಇಂದು ಫಿಲ್ಮ್ ಚೇಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಎನ್.ಎಮ್ ಸುರೇಶ್ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಪತ್ರದಲ್ಲಿ ಇಂದ್ರಜಿತ್ ಮಾತುಗಳ ನನಗೆ ಮಾನಸಿಕ ತೊಳಲಾಟಕ್ಕೆ ತಳ್ಳಿವೆ. ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದರು.