ನವದೆಹಲಿ: ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಡಳಿತ ಸರ್ಕಾರವನ್ನು ದೋಷಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರೆ, ಇಂದು ಕೊರೊನಾ ಬಿಕ್ಕಟ್ಟು ನಿಯಂತ್ರಣಕ್ಕಾಗಿ ಪದೇ ಪದೇ ಎದೆ ಬಡಿದುಕೊಂಡು ವಿದೇಶಗಳಿಂದ ನೆರವು ಪಡೆಯವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
विदेशी सहारा पाने पर केंद्र सरकार का बार-बार छाती ठोकना निराशाजनक है।
अगर मोदी सरकार ने अपना काम किया होता, तो ये नौबत ना आती।
— Rahul Gandhi (@RahulGandhi) May 10, 2021
ಕೇಂದ್ರ ಸರ್ಕಾರ ಈಗ ಎದೆ ಬಡಿದುಕೊಂಡು ವಿದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಿರುವುದನ್ನು ನೋಡಿದರೆ, ಪರಿಸ್ಥಿತಿ ಬಹಳ ಕರುಣಾಜನಕವಾಗಿದೆ ಎನ್ನಿಸುತ್ತದೆ.ನಗರಗಳ ಬಳಿಕ, ಹಳ್ಳಿಗಳೂ ಸೋಂಕು ಹಬ್ಬುತ್ತಿದೆ. ನಗರಗಳ ಬಳಿಕ ಈಗ ಹಳ್ಳಿಗಳೂ ಭಗವಂತನ ಕೈಯಲ್ಲಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಕೈಗೊಂಡಿರುವ ಕ್ರಮಗಳನ್ನು ಸತತವಾಗಿ ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಗೆ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ
शहरों के बाद, अब गाँव भी परमात्मा निर्भर! pic.twitter.com/KvJxN6fRIU
— Rahul Gandhi (@RahulGandhi) May 9, 2021
ಕೊರೊನಾ ನಿರ್ವಹಣೆ ಸಂಬಂಧ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಭಾರತ ವಿದೇಶಗಳಿಂದ ಪಡೆದ ಎಲ್ಲ ಪರಿಹಾರ ಸಾಮಗ್ರಿಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದವಾರ ಕಾಂಗ್ರೆಸ್ ಒತ್ತಾಯಿಸಿತ್ತು.