ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆ ಮಗನ ಕೊಂದು ಆತ್ಮಹತ್ಯೆ ಮಾಡ್ಕೊಂಡ್ಳು!

Public TV
1 Min Read
Son Murder

– ಮಹಿಳೆ ಸೂಸೈಡ್ ಮಾಡ್ಕೊಂಡಿದ್ದು ಯಾಕೆ?

ಕೋಲ್ಕತ್ತಾ: ಒಂದು ವರ್ಷದ ಮಗನನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಅಸನಸೋಕ್ ನಗರದ ಹೀರಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Son Murder 1

31 ವರ್ಷದ ಬೌಸಾಖಿ ಮಾಜೀ ಮಗನನ್ನ ಕೊಂದು ಸೂಸೈಡ್ ಮಾಡಿಕೊಂಡ ಮಹಿಳೆ. ಮೃತ ಮಹಿಳೆ ಸರ್ಕಾರಿ ಉದ್ಯೋಗಿಯಾಗಿದ್ದು, ಪುತ್ರನಿಗೆ ಶ್ರವಣದೋಷ ಹಿನ್ನೆಲೆ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಜಾರಿದ್ದರು. ಮಹಿಳೆ ಪತಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಹೀರಾಪುರದ ರಾಧಾನಗರದಲ್ಲಿ ವಾಸವಾಗಿದ್ದರು.

Son Murder 2

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಪೊಲೀಸರು ಬೌಸಾಖಿ ಪತಿ ಮತ್ತು ಸಹದ್ಯೋಗಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *