– ನಾಯಿಯ ವೀಡಿಯೋ ವೈರಲ್
– ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ
ಲಕ್ನೋ: ಸರ್ಕಾರಿ ಆಸ್ಪತ್ರೆಯೊಂದರ ಸ್ಟ್ರೆಚರ್ ನಲ್ಲಿದ್ದ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿನ್ನುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಹೃದಯವಿದ್ರಾವಕ ವೀಡಿಯೋ ನೋಡಿದ ನೆಟ್ಟಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Sambhal: A stray dog was seen tugging at a body, left unattended on a stretcher at Dist Hospital. Body was of a minor girl who died in a road accident. A sweeper & a ward boy suspended. Her father says, "It was left unattended for 1.5 hrs. It's negligence of the hospital."(26.11) pic.twitter.com/kVXxn8DRXX
— ANI UP/Uttarakhand (@ANINewsUP) November 26, 2020
Advertisement
ಬಾಲಕಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಆಕೆಯ ಮೃತದೇಹವನ್ನು ಸಂಬಾಲ್ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಸ್ಟ್ರೆಚರ್ ನಲ್ಲಿ ಇರಿಸಲಾಗಿದ್ದ ಮೃತದೇಹವನ್ನು ನಾಯಿ ಎಳೆದು ತಿಂದಿದೆ. ಈ ಘಟನೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಈ ಮೂಲಕ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತನವನ್ನು ಬಹಿರಂಗಪಡಿಸಿದ್ದಾನೆ.
Advertisement
Advertisement
ಈ ಸಂಬಂಧ ಬಾಲಕಿಯ ತಂದೆ ಮಾತನಾಡಿ, ಅಪಘಾತದಲ್ಲಿ ನನ್ನ ಮಗಳು ಮೃತಪಟ್ಟಿದ್ದಳು. ಹೀಗಾಗಿ ಮರಣೋತ್ತರ ಪರೀಕ್ಷೆಗೆಂದು ಆಕೆಯ ಮೃತದೇಹವನ್ನು ಸುಮಾರು 2 ಗಂಟೆಗಳ ಮೊದಲೇ ಆಸ್ಪತ್ರೆಗೆ ತರಲಾಗಿತ್ತು. ಇದೀಗ ಮಗಳ ಮೃತದೇಹವನ್ನು ನಾಯಿ ಎಳೆದು ತಿನ್ನುತ್ತಿರುವ ದೃಶ್ಯ ಬಯಲಾಗಿದ್ದು, ಇದು ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಬಯಲು ಮಾಡಿದೆ ಎಂದು ತಿಳಿಸಿದ್ದಾರೆ.
Body was handed over to family after formalities. They didn't want postmortem & were taking it away. They might've left it unattended for a minute when it happened. I wrote to Municipality about stray dog menace but to no avail. Probe committee formed:Chief Medical Superintendent https://t.co/rX0c4Cbgyt pic.twitter.com/mNrzpkk4Ys
— ANI UP/Uttarakhand (@ANINewsUP) November 26, 2020
ಇನ್ನು ಮುಖ್ಯ ವೈದ್ಯಕೀಯ ಅಧಿಕಾರಿ ಅಮಿತಾಭ್ ಸಿಂಗ್ ಮಾತನಾಡಿ, ಈ ಘಟನೆಯ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.