– ಗೆದ್ದು ಬೀಗುವಂತೆ ಯುವರತ್ನಗೆ ಶುಭ ಹಾರೈಕೆ
ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.50ರಷ್ಟು ಭತೀಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸಬೇಕಾಗಿದೆ ಎಂದು ಸ್ಯಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
Advertisement
ಈ ಸಂಬಂಧ ಟ್ವೀಟ್ ಮಾಡಿರುವ ನಟ, ಥಿಯೇಟರ್ ಗಳಲಿ ಮತ್ತೆ ಶೇ.50ರಷ್ಟು ಆಸನಗಳನ್ನು ಭರ್ತಿ ಮಾಡಬೇಕು ಎಂದರೆ ನಿಜಕ್ಕೂ ಇದೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ಸರ್ಕಾರದ ನಿರ್ಧಾರದಿಂದ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಎದುರಾಗಿದೆ. ಸರ್ಕಾರದ ನಿಯಮಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯವಾಗುತ್ತದೆ. ಆದರೂ ಇಂತಹ ಸಂದರ್ಭವನ್ನು ಎದುರಿಸಿ ಗೆದ್ದು ಬರುವ ಶಕ್ತಿ ಯುವರತ್ನ ತಂಡಕ್ಕೆ ಸಿಗಲಿ ಎಂದು ಆಶಿಸುವುದಾಗಿ ಅವರು ತಿಳಿಸಿದರು.
Advertisement
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious. @hombalefilms
— Kichcha Sudeepa (@KicchaSudeep) April 3, 2021
Advertisement
ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿತ್ತು.
Advertisement
ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ತೀವ್ರ ಆಕ್ಷೇಪ ಹಾಗೂ ಬೇಸರ ಹೊರಹಾಕಿದ್ದರು. ಯಾಕಂದರೆ ಪುನೀತ್ ನಟನೆಯ ಯುವರತ್ನ ಚಿತ್ರ ಬಿಡುಗಡೆಯಾಗಿ ಕೇವಲ 2 ದಿನಕ್ಕೆ ಸರ್ಕಾರ ಈ ನಿರ್ಬಂದ ಹೇರಿದ್ದ ಕಾರಣ ನಟ ಆಕ್ರೋಶ ಹೊರಹಾಕಿದ್ದರು. ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ಚಂದನವನದ ಇತರರು ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.