ನೈರೋಬಿ: ವೈದ್ಯರು ವ್ಯಕ್ತಿಯೊಬ್ಬನು ಸತ್ತಿದ್ದಾನೆ ಎಂದು ಹೇಳಿದ ಮೂರು ಗಂಟೆಗಳ ನಂತರ ಕಣ್ಣು ಬಿಟ್ಟು ಕುಳಿತಿರುವ ಘಟನೆ ಕೀನ್ಯಾದಲ್ಲಿ ನಡೆದಿದೆ.
ಪೀಟರ್ ಕಿಗೆನ್(32) ಎಂಬಾತನನ್ನು ಕೆರಿವೋ ಕೌಂಟಿಯಲ್ಲಿರುವ ಕಪ್ಕಾಟೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಪೀಟರ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ಮೃತದೇಹವನ್ನು ಶವಗಾರದಲ್ಲಿ ಇಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ದಿಢೀರನೆ ಎದ್ದು ಕುಳಿತಿದ್ದಾನೆ.
Advertisement
Advertisement
ನಡೆದದ್ದು ಏನು?
ಪೀಟರ್ ಹೊಟ್ಟೆ ನೋವು ಎಂದು ಮನೆಯಲ್ಲಿ ಕುಸಿದು ಬಿದ್ದಿದ್ದನು. ಆಗ ಇವನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ವೈದ್ಯರು ಪೀಟರ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
Advertisement
ಈ ವೇಳೆ ಪೀಟರ್‍ನ ಮೃತದೇಹವನ್ನು ಕೊಳೆಯದಂತೆ ಸುರಕ್ಷಿತವಾಗಿಡಲು ಶವದ ಬಲ ಕಾಲನ್ನು ಸೀಳಿ ಫಾರ್ಮಾಲಿನ್ ತುಂಬಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಶವಗಾರದಲ್ಲಿ ಪೀಟರ್‍ನ ಶವ ಇಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪೀಟರ್ ದಿಢೀರನೆ ಎದ್ದು ಕುಳಿತು ಕಾಲು ನೋವು ಎಂದು ಅಳಲು ಪ್ರಾರಂಭ ಮಾಡಿದ್ದಾನೆ.
Advertisement
ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಪೀಟರ್‍ನನ್ನು ವಾರ್ಡ್‍ಗೆ ಕರೆತಂದು ಚಿಕಿತ್ಸೆ ಕೊಟ್ಟಿದ್ದಾರೆ. ಪೀಟರ್ ಬದುಕಿ ಬಂದಿರುವ ಬಗ್ಗೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.