ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿದ್ದು, ಈ ಘಟನೆ ಕುರಿತಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ರಾಹುಲ್ ಗಾಂಧಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಸತ್ತರೋ ಅಥವಾ ಕೊಂದರೋ? ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ವ್ಯವಸ್ಥೆ ಎಚ್ಚರಗೊಳ್ಳವ ಮುನ್ನ ಎಷ್ಟು ಬಲಿ ಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
Advertisement
Died or Killed?
My heartfelt condolences to their families.
How much more suffering before the ‘system’ wakes up? pic.twitter.com/JrfZbIo7zm
— Rahul Gandhi (@RahulGandhi) May 3, 2021
Advertisement
ಈ ಕುರಿತಂತೆ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ, ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯದ ಕೊಲೆ ಇದಾಗಿದೆ. ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಸಿಎಂ ಯಡಿಯೂರಪ್ಪನವರಿಗೆ ಸಾವಿನ ನೈತಿಕ ಜವಾಬ್ದಾರಿ ಇದೆಯೇ? ಎಂದು ಪ್ರಶ್ನಿಸುವ ಮೂಲಕ ಟ್ಟಿಟ್ಟರ್‌ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
Advertisement
This is murder by designed negligence of Yediyurappa Govt !
Health Minister must resign.
Will CM Yediyurappa ji own moral responsibility for the deaths?#CovidIndia https://t.co/CLEku3QCeG
— Randeep Singh Surjewala (@rssurjewala) May 3, 2021