ಹಾಸನ: ತಾಲೂಕಿನ ನಿರ್ವಹಣೆ ಹಣಕ್ಕೆ ರೀ ಸ್ವಾಮಿ ನಿಮ್ಮ ಬಳಿ ಬಿಕ್ಷೆ ಬೇಡಬೇಕಾ..? ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಮ್ಮ ಕೈಯಲ್ಲಿದ್ದ ಮಾಹಿತಿ ಪತ್ರವನ್ನು ಸಚಿವರೆದುರೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಜಿಲ್ಲಾ ಪಂಚಾಯ್ತಿ ಆವಣದಲ್ಲಿ ಕೋವಿಡ್ 19 ರ ಸಭೆ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಚಿವರ ಎದುರಲ್ಲಿಯೇ ಪತ್ರ ಹರಿದು ಹಾಕುವ ಮೂಲಕ ಕೆಂಡಾಮಂಡಲವಾದ್ರು.
ನನ್ನ ಜನ ಜಿಲ್ಲೆಯಲ್ಲಿ ಸಾಯುತ್ತಿದ್ದಾರೆ. ಅವರಿಗೆ ನಾವು ಯಾವ ರೀತಿ ಉತ್ತರ ಕೊಡಬೇಕು. ನಿಮ್ಮ ಡಿಸಿ ಬಳಿ ಸರ್ಕಾರದ ಹಣವನ್ನು ಇಟ್ಟುಕೊಂಡು ದಿನಾ ಪೂಜೆ ಮಾಡೋಕೆ ಹೇಳಿ ಅಂತ ಕೂಗಾಡಿದ್ರು.
ರೇವಣ್ಣನ ಕೂಗಾಟ ಕಿರುಚಾಟ ನೋಡಿ ಆಕ್ರೋಶವನ್ನು ತಣ್ಣಗಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಧ್ಯಸ್ಥಿಕೆ ವಹಿಸಿ ಕಡೆಗೂ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.