ಬೆಂಗಳೂರು/ ನವದೆಹಲಿ: ಸಂಪುಟ ಸರ್ಜರಿ ನಡೆಯುವುದು ಖಚಿತ. ಆದರೆ ಯಾವಾಗ ಆಗಲಿದೆ? ಸಂಪುಟ ವಿಸ್ತರಣೆನಾ? ಅಥವಾ ಪುನಾರಚನೆನಾ ಎನ್ನುವುದು ಇನ್ನು ಫೈನಲ್ ಆಗಿಲ್ಲ. ಸಂಪುಟ ಸರ್ಜರಿಯ ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ.
ಇಂದು ಮಧ್ಯಾಹ್ನ ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ಸಂಪುಟ ಸರ್ಜರಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಿದರೂ ಸರಿ, ವಿಸ್ತರಣೆಗೆ ಒಪ್ಪಿಗೆ ಕೊಟ್ಟರೂ ಸರಿ ಎನ್ನುತ್ತಾ, ಯಡಿಯೂರಪ್ಪ ತಾವು ಕೊಂಡೊಯ್ದಿದ್ದ ಸಂಭಾವ್ಯ ಸಚಿವರ 2 ಪಟ್ಟಿಯನ್ನು ಜೆಪಿ ನಡ್ಡಾಗೆ ನೀಡಿದ್ದಾರೆ. ಜೊತೆಗೆ ಸಂಪುಟದಿಂದ ಕೈಬಿಡಬಹುದಾದ ಸಚಿವರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿಎಂ ನೀಡಿದರು. ಇದನ್ನೂ ಓದಿ: ಕೆಲ ಸಚಿವರ ಪಾಲಿಗೆ ಇದೆ ಕೊನೆಯ ಕ್ಯಾಬಿನೆಟ್ – ಸಭೆಯ ಇನ್‍ಸೈಡ್ ಸ್ಟೋರಿ
Advertisement
Advertisement
ಬಿಎಸ್‍ವೈ ನೀಡಿದ ಪಟ್ಟಿಗಳನ್ನು ಪರಿಶೀಲಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಈ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿ ಕಳಿಸಿದ್ದಾರೆ. ಜೆಪಿ ನಡ್ಡಾ ಭೇಟಿ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ಪುನಾರಚನೆಯೋ, ವಿಸ್ತರಣೆಯೋ ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ನಾನು ಕೂಡ ಅಮಿತ್ ಶಾ, ಜೆಪಿ ನಡ್ಡಾ ನಿರ್ಧಾರವನ್ನು ಎದುರು ನೋಡ್ತಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
Advertisement
ಅಮಿತ್ ಶಾ ಭೇಟಿಗೆ ಇಂದು ಕೂಡ ಯಡಿಯೂರಪ್ಪಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಬರಿಗೈಯಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಹೈಕಮಾಂಡ್, ಸಂಪುಟ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಇದೀಗ ಸಿಎಂ ಯಡಿಯೂರಪ್ಪ ಆದಿಯಾಗಿ ರಾಜ್ಯ ಬಿಜೆಪಿ ನಾಯಕರ ಚಿತ್ತ ಹೈಕಮಾಂಡ್‍ನತ್ತ ನೆಟ್ಟಿದೆ.
Advertisement
ಸಿಎಂ ಪ್ರಸ್ತಾಪವೇನು?
ಸಂಪುಟ ವಿಸ್ತರಣೆಯಾದರೂ ಓಕೆ, ಪುನಾರಚನೆಯಾದರೂ ಓಕೆ. 12 ಮಂದಿ ಪೈಕಿ 9 ಮಂದಿಗೆ ಸಚಿವ ಸ್ಥಾನಕ್ಕೆ ಅನುಮತಿ ನೀಡಿ. 12 ಮಂದಿಯ ಪೈಕಿ ಮೂವರನ್ನು ಸಚಿವರನ್ನಾಗಿ ಮಾಡಬೇಕು. ಸರ್ಕಾರ ರಚನೆಗೆ ಕಾರಣವಾದ ಮೂವರಿಗೆ ಸಚಿವ ಸ್ಥಾನ ನೀಡಬೇಕು. ಇನ್ನುಳಿದ 9 ಮಂದಿ ಪೈಕಿ 6 ಮಂದಿ ಆಯ್ಕೆ ನಿಮ್ಮ ವಿವೇಚನೆಗೆ ಬಿಟ್ಟದ್ದು. ಉಪ ಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆಗೆ ಅನುಮತಿ ಕೊಡಿ ಎಂದು ಸಿಎಂ ಪ್ರಸ್ತಾಪ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಹೈಕಮಾಂಡ್ ಒಪ್ಪಿದ್ರೆ 6+3 ಫಾರ್ಮುಲಾ ಫೈನಲ್ – ಗೇಟ್‌ಪಾಸ್ ಯಾರಿಗೆ?
ಇವರಿಗೆ ಒಲಿಯುತ್ತಾ ಲಕ್?
– ಎಂಟಿಬಿ ನಾಗರಾಜ್, ಎಂಎಲ್‍ಸಿ
– ಆರ್.ಶಂಕರ್, ಎಂಎಲ್‍ಸಿ
– ಮುನಿರತ್ನ, ಆರ್‌ಆರ್ ನಗರ ಶಾಸಕ
– ಉಮೇಶ್ ಕತ್ತಿ, ಹುಕ್ಕೇರಿ
– ಅರವಿಂದ ಲಿಂಬಾವಳಿ, ಮಹಾದೇವಪುರ, ಬೆಂಗಳೂರು
– ಯೋಗೇಶ್ವರ್, ಎಂಎಲ್‍ಸಿ
– ಸುನೀಲ್ ಕುಮಾರ್, ಕಾರ್ಕಳ
– ಜಿಹೆಚ್ ತಿಪ್ಪಾರೆಡ್ಡಿ, ಚಿತ್ರದುರ್ಗ
– ರೇಣುಕಾಚಾರ್ಯ, ಹೊನ್ನಾಳಿ
– ಎಸ್.ಅಂಗಾರ, ಸುಳ್ಯ
– ಎಂಪಿ ಕುಮಾರಸ್ವಾಮಿ, ಮೂಡಿಗೆರೆ
– ಹಾಲಪ್ಪಾ ಆಚಾರ್, ಯಲಬುರ್ಗಾ