ಸಂಡೇ ಕರ್ಫ್ಯೂ, ಸರ್ಕಾರಿ ನೌಕರರ ಶನಿವಾರದ ರಜೆಯೂ ಕ್ಯಾನ್ಸಲ್

Public TV
1 Min Read
Bengaluru Lockdown Police 2

ಬೆಂಗಳೂರು: ಕೇಂದ್ರ ಸರ್ಕಾರ ಅನ್‍ಲಾಕ್ 3ಗೆ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ನಿರ್ಧರಿಸಿದೆ. ಇದರ ಜೊತೆಗೆ ಸಂಡೇ ಲಾಕ್‍ಡೌನ್, ಶನಿವಾರ ರಜೆ ದಿನವನ್ನೂ ರದ್ದುಗೊಳಿಸಿದೆ.

Bengaluru Lockdown Police 4

ಕೇಂದ್ರದ ಮಾರ್ಗಸೂಚಿಯಂತೆ ಆಗಸ್ಟ್ 1ರಿಂದ ನೈಟ್ ಕರ್ಫ್ಯೂ ರದ್ದು, ಆಗಸ್ಟ್ 5ರಿಂದ ಯೋಗ, ಜಿಮ್ ಓಪನ್ ಸೇರಿದಂತೆ ಆಗಸ್ಟ್ 31ರವರೆಗೆ ಶಾಲೆ ಕಾಲೇಜ್ ನಿರ್ಬಂಧ ಮುಂದುವರಿಕೆಯನ್ನು ಪಾಲಿಸಿದೆ. ಜೊತೆಗೆ ಥಿಯೇಟರ್, ಬಾರ್, ರೆಸ್ಟೋರೆಂಟ್, ಮೆಟ್ರೋಗೆ ಅವಕಾಶ ಇಲ್ಲ. ಇದನ್ನೂ ಓದಿ: ಆ.31ರವರೆಗೆ ಶಾಲಾ, ಕಾಲೇಜಿಲ್ಲ – ಆ.5ರಿಂದ ಜಿಮ್ ಓಪನ್

namma metro 1

ರಾಜಕೀಯ, ಧಾರ್ಮಿಕ ಸಮಾರಂಭ ಮಾಡುವಂತಿಲ್ಲ. ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಸಂಚಾರ ನಿರ್ಬಂಧವಿಲ್ಲ. ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ಇಲ್ಲ. ಬಫರ್ ಝೋನ್‍ಗಳಲ್ಲಿ ಬಿಗಿ ನಿಯಮ ಅಂದಿದೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಗೂ ಅನುಮತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *