ಸಂಗೀತ ದಿಗ್ಗಜೆಯ ಪುತ್ಥಳಿ ಮನೆಯೊಳಗೆ ಅನಾವರಣ

Public TV
2 Min Read
UDP 5

– ಅಭಿಮಾನಕ್ಕೆ ತೇವಗೊಂಡ್ತು ಪೋಷಕರ ಕಣ್ಣಾಲಿಗಳು

ಉಡುಪಿ: ಎಂದೋ ಕೇಳಿದ ಒಂದು ಹಾಡು, ಯಾರೋ ಆಡಿದ ಒಂದು ಮಾತು. ಇನ್ನೆಂದೋ ನಿಮಗೆ ಸ್ಫೂರ್ತಿ ನೀಡಬಹುದು. ಉಡುಪಿಯಲ್ಲೂಂದು ಸ್ಮರಣೀಯ ಪ್ರತಿಮೆ ನಿರ್ಮಾಣವಾಗಿದೆ. ಬದುಕಿದ್ದಾಗ ನಾಡಿನಾದ್ಯಂತ ಹೆಸರು ಮಾಡಿದ್ದ ಗಾಯಕಿಯೊಬ್ಬರು, ತಮ್ಮ ಕಾಲಾನಂತರ ಶಿಲ್ಪಿಯೊಬ್ಬರಿಗೆ ಸ್ಫೂರ್ತಿಯಾಗಿದ್ದಾರೆ.

ಹೆಸರು ವಿಳಾಸ ಹೇಳಲು ಬಯಸದೆ ಅನಾಮಿಕರಾಗಿಯೇ ಇರಲು ಬಯಸಿರುವ ಈ ಶಿಲ್ಪಿ ತನ್ನ ನೆಚ್ಚಿನ ಗಾಯಕಿ ಉಡುಪಿಯ ರಂಜನಿ ಹೆಬ್ಬಾರ್ ಅವರ ಗೌರವಾರ್ಥ ಸುಂದರ ಪ್ರತಿಮೆ ನಿರ್ಮಿಸಿಕೊಟ್ಟಿದ್ದಾರೆ. ರಂಜನಿ ಹೆಬ್ಬಾರ್, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದ ಅಪರೂಪದ ಗಾಯಕಿ. ಏಳು ವರ್ಷಗಳ ಹಿಂದೆ ಈಕೆ ಇಹ ಲೋಕದಿಂದ ದೂರವಾದರು. ಆಕೆಯ ಸ್ಮರಣೆಯಲ್ಲಿ ಪ್ರತೀ ವರ್ಷ ಉಡುಪಿಯಲ್ಲಿ ಸಂಗೀತೋತ್ಸವ ನಡೆಸಲಾಗುತ್ತದೆ.

UDP 1 6

ಈ ಬಾರಿ ಫೇಸ್‍ಬುಕ್ ಮೂಲಕವೇ ದೇಶ- ವಿದೇಶಗಳ ಕಲಾವಿದರು ಸಂಗೀತೋತ್ಸವದಲ್ಲಿ ಭಾಗಿಯಾಗಿದ್ದಾರೆ. ಸೆಪ್ಟೆಂಬರ್ 9 ರಂದು ರಂಜನಿ ಹೆಬ್ವಾರ್ ಜನ್ಮದಿನದಂದು ಆಕೆಯ ಮನೆ ಲತಾಂಗಿಯಲ್ಲಿ ಅಪರೂಪದ ಪ್ರತಿಮೆ ಅನಾವರಣಗೊಂಡಿದೆ. ಬದುಕಿದ್ದಾಗ ಈ ಗಾಯಕಿಯನ್ನು ಒಮ್ಮೆಯೂ ನೋಡಿರದ ಅಜ್ಞಾತ ಶಿಲ್ಪಿಯೊಬ್ಬರು ಈ ಆಳೆತ್ತರದ ವಿಗ್ರಹ ತಯಾರಿಸಿದ್ದಾರೆ. ನೆಚ್ಚಿನ ಗಾಯಕಿಯ ನೆನಪಲ್ಲಿ ರಂಜನಿ ಮೆಮೋರಿಯಲ್ ಟ್ರಸ್ಟ್‍ಗೆ ಈ ವಿಗ್ರಹ ಹಸ್ತಾಂತರಿಸಿದ್ದಾರೆ. ಇಂದ್ರಾಳಿಯ ಲತಾಂಗಿಯಲ್ಲಿ ಸ್ವಾಮಿ ಸೂರ್ಯಪಾದರು ಪ್ರತಿಮೆ ಅನಾವರಣಗೊಳಿಸಿದರು.

ಟ್ರಸ್ಟ್ ನ ಪ್ರಮುಖರಾದ ವಿ.ಅರವಿಂದ ಹೆಬ್ಬಾರ್ ಮಾತನಾಡಿ ರಂಜನಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಆಕೆ ಕೇವಲ ನನ್ನ ಮಗಳಲ್ಲ ಶುದ್ಧ ಸಂಗೀತದ ಅಭಿಮಾನಿಗಳು ಮತ್ತು ಆಕೆಯ ಕಲೆಯನ್ನು ಇಷ್ಟಪಡುವ ಪ್ರತಿಯೊಬ್ಬರ ಮಗಳು, ಈ ಪ್ರತಿಮೆ ಆಕೆಯ ಕಲಾಸೇವೆಯನ್ನು ನಿತ್ಯವೂ ಸ್ಮರಿಸುವುದಕ್ಕೊಂದು ಮಾಧ್ಯಮ ಎಂದು ಹೇಳಿದರು. ಈ ವೇಳೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಸಂತಲಕ್ಷ್ಮೀ ಹೆಬ್ಬಾರ್, ಸಾರಂಗ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರತಿಮೆ ಅನಾವರಣದ ಬಳಿಕ ಸ್ವಾಮಿ ಸೂರ್ಯಪಾದರಿಂದ ಸತ್ಸಂಗ ನಡೆಯಿತು.

UDP 2 3

ಸೆ.1 ರಿಂದ ನಿರಂತರ 13 ದಿನಗಳ ಈ ಸಂಗೀತೋತ್ಸವದಲ್ಲಿ ದೇಶ-ವಿದೇಶಗಳ ಪ್ರಖ್ಯಾತ ಸಂಗೀತ ಕಲಾವಿದರು. ಫೇಸ್ ಬುಕ್ ಲೈವ್ ಮೂಲಕವೇ ಪ್ರತಿದಿನ ಸಂಗೀತ ಕಚೇರಿ ನೀಡುತ್ತಿದ್ದಾರೆ. ಈಗಾಗಲೇ ತಿರುಮೆಗ್ನನಂ ಟಿಪಿಎನ್ ರಮಾನಾಥನ್ ಮತ್ತು ಪಂಡಮಂಗಲಂ ಪಿ.ಜಿ.ಯುವರಾಜ್, ಚೆನ್ನೈನ ಪ್ರಾರ್ಥನಾ ಸಾಯಿ ನರಸಿಂಹನ್, ಬೆಂಗಳೂರಿನ ಸಿದ್ದಾರ್ಥ ಬೆಳ್ಮಣ್ಣು, ಯು.ಎಸ್. ಎ, ಹ್ಯೂಸ್ಟನ್ ನಿಂದ ಕೃತಿ ಭಟ್, ರಮಣಾ ಬಾಲಚಂದ್ರನ್, ಚೆನ್ನೈನ ಸತ್ಯನಾರಾಯಣ, ಬೆಂಗಳೂರಿನ ಸ್ಪೂರ್ತಿ ರಾವ್ , ಐಶ್ವರ್ಯ ವಿದ್ಯಾ ರಘುನಾಥ್, ಚೆನ್ನೈನ ಜೆ.ಬಿ.ಶೃತಿ ಸಾಗರ್, ಮೈಸೂರಿನ ದೇವಿ, ಅನುಪಮಾ ಭಾಗವತ್, ಕು. ಸಮನ್ವಿ ಅವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *