ಬೆಂಗಳೂರು: ರಾಜಕೀಯ ನಾಯಕರು ಎಷ್ಟೇ ಕಿತ್ತಾಡಿಕೊಂಡರೂ ಪರಸ್ಪರ ಭೇಟಿಯಾದಾಗ ನಾವೆಲ್ಲ ಒಂದೇ ಎಂಬಂತೆ ನಡೆದುಕೊಳ್ಳುತ್ತಾರೆ. ಅಂತೆಯೇ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಇಬ್ಬರು ಹಾಸ್ಯ ಮಾತುಗಳನ್ನಾಡಿದರು.
ರೇಣುಕಾಚಾರ್ಯ ಅವರು ಇಂದು ವಿಧಾನಸೌಧದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅದೇ ವೇಳೆ ತಮ್ಮ ಬಳಗದೊಂದಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಲ್ಲದೆ ರೇಣುಕಾಚಾರ್ಯರನ್ನು ನೋಡಿ ಏನಪ್ಪಾ ಅಂತ ಹೇಳಿದ್ದಾರೆ. ಇದೇ ವೇಳೆ ಜಮೀರ್ ಅವರು, ರೇಣುಕಚಾರ್ಯ ಅವರೇ ಸಾಹೆಬ್ರು ಕರೀತಿದ್ದಾರೆ. ಬೇಗ ಮುಗಿಸ್ಬೇಕಂತೆ ಅಂತ ಹೇಳುತ್ತಾ ತಮಾಷೆ ಮಾಡಿಕೊಂಡು ಮುಂದೆ ಹೋಗಿದ್ದಾರೆ. ಇದನ್ನೂ ಓದಿ: ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು
ಸಿದ್ದರಾಮಯ್ಯರನ್ನು ಕಂಡ ರೇಣುಕಾಚಾರ್ಯ ನನ್ನ ಮಾತು ಮುಗೀತು ಬನ್ನಿ ಬನ್ನಿ ಎಂದು ಕರೆದಿದ್ದಾರೆ. ತಮ್ಮದುರು ಸಿದ್ದರಾಮಯ್ಯ ಹಾಗೂ ಬಳಗ ಬರುತ್ತಿದ್ದಂತೆಯೇ ಸಂಗಣ್ಣನ ಕರೆದುಕೊಂಡು ಬಂದಿದ್ದೀರಿ ಸಾರ್ ಅಂತ ನಕ್ಕಿದ್ದಾರೆ. ಆಗ ಸಿದ್ದರಾಮಯ್ಯ ಅವರು, ಅವರ ಮೇಲೆ 307 ಕೇಸ್ ಹಾಕಿಸಿ ಬಿಟ್ಟಿದ್ದಿಯಾ ನೀನು ಅಂದಾಗ ಅವನು ಬಾರಿ ಬುದ್ಧಿವಂತ ಸಾರ್. ಅವನಷ್ಟು ಕಿಲಾಡಿ, ಬುದ್ಧಿವಂತ ಯಾರಿಲ್ಲ ಎಂದು ಹೇಳುತ್ತಾ ಕೈ ಮುಗಿದು ಮುಂದೆ ಸಾಗಿದ ಪ್ರಸಂಗ ನಡೆಯಿತು.