ನವದೆಹಲಿ: ರಾಜ್ಯಸಭೆ ಬೆನ್ನಲ್ಲೇ ವಿಧಾನ ಪರಿಷತ್ ಗೂ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ಏಳು ಸ್ಥಾನಗಳ ಅವಧಿ ಮುಕ್ತಾಯವಾಗುವ ಹಿನ್ನಲೆಯಲ್ಲಿ ಚುನಾವಣೆ ಘೋಷಿಸಿದೆ.
ಪರಿಷತ್ ಸದಸ್ಯರಾದ ನಾಸೀರ್ ಅಹಮದ್, ಜಯಮ್ಮ, ಹೆಚ್.ಎಂ ರೇವಣ್ಣ, ವೇಣುಗೋಪಾಲ್, ಡಿ.ಯು ಮಲ್ಲಿಕಾರ್ಜುನ್, ಟಿ.ಎ. ಶರವಣ ಅವರ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಜೂನ್ 29 ರಂದು ಚುನಾವಣೆ ದಿನಾಂಕ ಘೋಷಿಸಲಾಗಿದೆ.
Advertisement
Advertisement
ಜೂನ್ 11ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಜೂಜ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್19 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಜೂನ್ 22 ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕ. ಜೂನ್ 29 ರಂದು ಬೆಳಗ್ಗೆ ಒಂಭತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ಮತದಾನ ನಡೆಯಲಿದ್ದು ನಾಲ್ಕು ಗಂಟೆ ಬಳಿಕ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಲಿದೆ.
Advertisement
ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಗೆಲ್ಲಬಹುದಾಗಿದ್ದು ರಾಜ್ಯಸಭೆ ಟಿಕೆಟ್ ಕಸರತ್ತಿನ ಬಳಿಕ ವಿಧಾನಸಭೆಗೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ನಲ್ಲಿ ಎರಡು ಸ್ಥಾನಗಳಿಗೆ ನಿವೇದಿತಾ ಅಳ್ವಾ, ಉಗ್ರಪ್ಪ, ಸುದರ್ಶನ್, ಐವಾನ್ ಡಿಸೋಜಾ ಪೈಪೋಟಿ ನಡೆಸುತ್ತಿದ್ದರೆ ಹೆಚ್.ಎಂ.ರೇವಣ್ಣ ನಾಸೀರ್ ಅಹಮದ್ ಮರು ಆಯ್ಕೆ ಬಯಸಿದ್ದಾರೆ. ಇನ್ನು ಭಾರತಿ ಶಂಕರ್, ರಾಣಿ ಸತೀಶ್ ಕೂಡ ರೇಸ್ ನಲ್ಲಿದ್ದಾರೆ
Advertisement
ಬಿಜೆಪಿಯಲ್ಲಿ ನಾಲ್ಕು ಸ್ಥಾನಗಳಿಗೆ ಪೈಪೋಟಿ ಇದ್ದು ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಹೆಚ್.ವಿಶ್ವನಾಥ್, ಶಂಕರಪ್ಪ, ಮಾಲೀಕಯ್ಯ ಗುತ್ತೇದಾರ್, ನಿರ್ಮಲ ಕುಮಾರ್ ಸುರಾನಾ ನಡುವೆ ಫೈಟ್ ಏರ್ಪಟ್ಟಿದೆ.
ಜೆಡಿಎಸ್ ನಿಂದ ಒಂದು ಸ್ಥಾನ ಸಿಗಲಿದ್ದು ಕೋನರೆಡ್ಡಿ, ಬಿ.ಬಿ.ನಿಂಗಯ್ಯ, ಜವರಾಯಿಗೌಡ, ಶರವಣ, ಕುಪೇಂದ್ರ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ. ರಾಜ್ಯಸಭೆಯಿಂದ ಶುರುವಾಗಿದ್ದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸುಗೊಳ್ಳಲಿದೆ.
https://www.facebook.com/publictv/posts/4369546059729779