ಲಕ್ನೋ: ಶಿವನನ್ನು ಮೆಚ್ಚಿಸಲು ಮಹಿಳೆ ಜೀವಂತ ಸಮಾಧಿಯಾಗಲು ಹೊರಟಿರುವ ಘಟನೆ ಉತ್ತರಪ್ರದೇಶದ ಸಜೆತಿಯಲ್ಲಿ ನಡೆದಿದೆ.
ಗೋಮತಿ ದೇವಿ (50) ಶಿವನನ್ನು ಮೆಚ್ಚಿಸಲು ಜೀವಂತ ಸಮಾಧಿಯಾಗಲು ಹೋದ ಮಹಿಳೆಯಾಗಿದ್ದಾಳೆ. ಗ್ರಾಮಸ್ಥರು ನೀಡಿದ ಮಾಹಿಯನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಕೆಯನ್ನು ರಕ್ಷಿಸಿದ್ದಾರೆ.
ಪತಿಯಂತೆ ಗೋಮತಿ ದೇವಿ ಶಿವನ ಕುರಿತಾಗಿ ಅಪಾರವಾದ ಭಕ್ತಿಯನ್ನು ಹೊಂದಿದ್ದಳು. ಒಂದು ದಿನ ಗೋಮುತಿಯ ಕನಸಿನಲ್ಲಿ ಶಿವಬಂದಿದ್ದನಂತೆ, ಜೀವಂತ ಸಮಾಧಿಯಾಗಲೂ ಹೇಳಿದ್ದಾನೆ. ನನ್ನನ್ನು ಮನೆ ಎದುರು ಗುಂಡಿ ತೋಡಿ ಹೂತು ಹಾಕಿ, ನಾನು ಶಿವನನ್ನು ಒಲಿಸಿಕೊಳ್ಳಲು ಹೀಗೆ ಮಾಡಬೇಕು ಎಂದು ಹೇಳಿದ್ದಾಳೆ.
ಗೋಮತಿಯ ಮಾತನನ್ನು ನಂಬಿದ ಕುಟುಂಬಸ್ಥರು ಮನೆಯ ಮುಂದೆ ನಾಲ್ಕು ಅಡಿ ಆಳದ ಗುಂಡಿಯನ್ನು ತೆಗೆದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಆ ಗುಂಡಿಯಲ್ಲಿ ಗೋಮತಿಯನ್ನು ಕೂರಿಸಿ ಪೂಜೆ ಮಾಡಿದ್ದಾರೆ. ನಂತರ ಗುಂಡಿಯ ಮೇಲೆ ಒಂದು ಮಂಚವನ್ನು ಇಟ್ಟು ಗುಂಡಿಗೆ ಮಣ್ಣು ತುಂಬಲಾರಂಭಿಸಿದ್ದಾರೆ. ಈ ಕೃತ್ಯವನ್ನು ಕಂಡಿರುವ ಕೆಲವು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋಮತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗೋಮತಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.