ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಗೆ ಲಘು ಗಾಯವಾಗಿದೆ.
ಎರಡು ದಿನದ ಹಿಂದೆ ಮನೆಯಲ್ಲಿ ಕ್ರಿಕೆಟ್ ಆಡುವ ಸಮಯದಲ್ಲಿ ಟೆನ್ನಿಸ್ ಬಾಲ್ ಕೈಗೆ ಬಿದ್ದಿದೆ. ಬಲವಾಗಿ ತೋರು ಬೆರಳಿನ ಮೇಲೆ ಬಿದ್ದ ಕಾರಣ ಲಘು ಗಾಯವಾಗಿದೆ.
ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ. ಆದರೆ ಸಣ್ಣ ಪೆಟ್ಟಾಗಿರುವ ಕಾರಣ ಶಿವಣ್ಣ ತೋರು ಬೆರಳಿಗೆ ಸಣ್ಣ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ.