ತುಮಕೂರು: ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್ ಎಂದು ಕಾಂಗ್ರೆಸ್ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಚಿವ ಮಾಧುಸ್ವಾಮಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ಮದಲೂರು ಕೆರೆ ನೀರಿನ ವಿವಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಶಾಪವೋ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರು. ಶಿರಾ ಉಪಚುನಾವಣೆ ವೇಳೆ ಮುಖ್ಯಮಂತ್ರಿಯಾಗಿದ್ದ ಬಿಎಸ್‍ವೈ ಕೆಲವೇ ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸಚಿವ ಮಾಧುಸ್ವಾಮಿ ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಅದು ಸರಿಯಲ್ಲವೆಂದು ನೇರವಾಗಿಯೇ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
Advertisement
Advertisement
ಸಚಿವ ಜೆ.ಸಿ.ಮಾಧುಸ್ವಾಮಿ ಕೇವಲ ಜೆ.ಸಿ.ಪುರಕ್ಕೆ ಮಾಧುಸ್ವಾಮಿ ಆಗಬಾರದು. ಇಡೀ ಕರ್ನಾಟಕಕ್ಕೆ ಕಾನೂನು ಮಂತ್ರಿ ಆಗಬೇಕು. ಕಾನೂನು ಬಿಟ್ಟು ಮಾತನಾಡಲು ಹೋಗಬೇಡಿ. ಈ ಮುಂಚೆ ಗೊಂದಲ ಸೃಷ್ಟಿಸಿ ಅವಾಂತರ ಮಾಡಿಕೊಂಡಿರುವುದು ರಾಜ್ಯದ ಜನರಿಗೆ ಗೊತ್ತಿದೆ. ನೀವು ಮಂತ್ರಿ ಆಗಿರಿ ಏನೇ ಆಗಿರಿ ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಎಂಟಿಸಿ ಸಿಬ್ಬಂದಿಯಿಂದ ಗಾಂಜಾ ಮಾರಾಟ-ಇಬ್ಬರು ಅರೆಸ್ಟ್
Advertisement
ಜನಸಮೂಹದ ಮೇಲೆ ಯಾವುದೇ ಒತ್ತಡವನ್ನು ತರುವುದಕ್ಕೆ ನಾವು ಬಿಡುವುದಿಲ್ಲ. ಮದಲೂರು ಕೆರೆಗೆ ಹೇಮವಾತಿ ನೀರನ್ನು ಭಿಕ್ಷೆಯಾಗಿ ಕೇಳುತ್ತಿಲ್ಲ. ನ್ಯಾಯಯುತವಾಗಿ ಕೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಜಮೀರ್‌ಗಾಗಿ ಡಿಕೆಶಿ, ಸಿದ್ದರಾಮಯ್ಯ ಬಣದ ತಂತ್ರ ಪ್ರತಿತಂತ್ರ – ವಾರದ ಮುನಿಸಿನ ಬಳಿಕ ಇಂದು ಭೇಟಿಯಾಗ್ತಾರಾ?