ಕೊಪ್ಪಳ: ಶಾಲೆ ಆರಂಭ ಮಾಡಬೇಕು. ಆರಂಭ ಮಾಡದಿದ್ದರೆ ಮಕ್ಕಳು ಬೇರೆ ಚಟ ಕಲಿತು ಬಿಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇನ್ನೂ ಎರಡು ತಿಂಗಳು ಶಾಲೆ ಆರಂಭ ಮಾಡುವುದು ಬೇಡ. ನಂತರ ಶಾಲೆ ಪ್ರಾರಂಭ ಮಾಡಬೇಕು. ಎಲ್ಲ ಸಿದ್ಧತೆ ಮಾಡಿಕೊಂಡು ಶಾಲೆ ಆರಂಭ ಮಾಡಬೇಕು. ಎರಡು ಪಾಳಿಯಲ್ಲಿ ಶಾಲೆ ಆರಂಭ ಮಾಡಿ, ಇರುವ ವಿದ್ಯಾರ್ಥಿಗಳನ್ನೇ ದೂರ ದೂರ ಕೂರಿಸಬೇಕು. ಅಲ್ಲದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
Advertisement
Advertisement
ಮಕ್ಕಳು ಒಂದು ವರ್ಷ ಶಾಲೆಗೆ ಹೋಗದಿದ್ದರೆ ಬೇರೆ ಚಟ ಕಲಿತು ಬಿಡುತ್ತಾರೆ. ಹೀಗಾಗಿ ಶಾಲೆ ಆರಂಭ ಮಾಡಬೇಕು. ನಮ್ಮ ಶಾಲೆ ಅರ್ಧಕ್ಕೆ ನಿಂತಿತ್ತು. ಆಗ ಓತಿಕೇತ ಹೊಡೆಯಲು ಹೋಗುತ್ತಿದ್ದೆವು. ಹೀಗಾಗಿ ನನ್ನ ಶಾಲೆ ಅರ್ಧಕ್ಕೆ ನಿಂತಿತು. ಆದ್ದರಿಂದ ತಡವಾಗಿ ಶಾಲೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಸಿದ್ದರಾಮಯ್ಯ ಹೇಳಿದರು.
Advertisement
ನಮ್ಮಲ್ಲಿ ಆನ್‍ಲೈನ್ ಶಿಕ್ಷಣ ಅಷ್ಟು ಯಶಸ್ವಿಯಾಗಿಲ್ಲ. ಕೊರೊನಾ ಮಕ್ಕಳಿಂದ ಹರಡುವುದಿಲ್ಲ. ವಿದೇಶದಿಂದ ವಿಮಾನದ ಮೂಲಕ ಬಂದವರು ಸೋಂಕು ತಂದರು. ಈ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುತ್ತೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಸಿದ್ದರಾಮಯ್ಯ ಸೂಚಿಸಿದರು.