ವೀಕ್‍ಎಂಡ್‍ನಲ್ಲಿ ಮಾಂಸ ಊಟವನ್ನು ಮಾಡಲು ಪ್ರತ್ರಿಯೊಬ್ಬರು ಆಸೆ ಪಡುತ್ತಾರೆ. ಹೆಚ್ಚಿನವರು ಶನಿವಾರ ಆಗಿರುವುದರಿಂದ ಮಾಂಸ ಸೇವೆನೆ ಮಾಡುವುದಿಲ್ಲ. ನಾಳೆ ಮಾಂಸದ ಊಟವನ್ನು ಮಾಡುವ ನೀವು ಇಂದು ಮೆನೆಯಲ್ಲಿ ರುಚಿ ರುಚಿಯಾದ ವೇಜ್ ಬಿರಿಯಾನಿ ಮಾಡಿ.. ಇದನ್ನೂಓದಿ: ಗರಿಗರಿಯಾದ ಆಲೂ ಬೋಂಡಾ ಮಾಡುವ ವಿಧಾನ
Advertisement
ಬೇಕಾಗುವ ಸಾಮಗ್ರಿಗಳು:
* ಬಾಸ್ಮತಿ ಅಕ್ಕಿ -1 ಕಪ್ ನೆನೆ ಹಾಕಿರಬೇಕು
* ಈರುಳ್ಳಿ – 1 ಕಪ್
* ಬೀನ್ಸ್ – 1 ಕಪ್
* ಕ್ಯಾರೆಟ್ – 1 ಕಪ್
* ಬಟಾಣಿ – 1/2 ಕಪ್
* ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್
* ಶುಂಠಿ ಪೇಸ್ಟ್ – 2 ಟೀ ಸ್ಪೂನ್
* ಟೊಮೆಟೊ ಪೇಸ್ಟ್ – 1 ಕಪ್
* ಪುದೀನಾ- ಅಗತ್ಯಕ್ಕೆ ತಕ್ಕಷ್ಟು
* ಕೊತ್ತಂಬರಿ ಸೊಪ್ಪು
* ತುಪ್ಪ – 4 1ಈ ಸ್ಪೂನ್
* ಮೊಸರು – 1 ಕಪ್
* ಖಾರದ ಪುಡಿ – ಅರ್ಧ ಟೀ ಸ್ಪೂನ್
* ಚಕ್ಕೆ – 1
* ಲವಂಗದ ಎಲೆ
* ಲವಂಗ- 2
* ಇಂಗು ಚಿಟಿಕೆ
* ಉಪ್ಪು ರುಚಿಗೆ ತಕ್ಕಷ್ಟು
* ಗರಂ ಮಸಾಲ ಪುಡಿ
* ಜೀರಿಗೆ – 1 ಟೀ ಸ್ಪೂನ್
* ಏಲಕ್ಕಿ – 4
Advertisement
ಮಾಡುವ ವಿಧಾನ:
* ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಯಲ್ಲಿ 5-10 ನಿಮಿಷಗಳ ಕಾಲ ನೆನೆಯಿಟ್ಟಿರಬೇಕು.
* ಒಂದು ಪಾತ್ರೆಯಲ್ಲಿ ಅಕ್ಕಿಗೆ ಎರಡರಷ್ಟು ಪ್ರಮಾಣದಲ್ಲಿ ನೀರನ್ನು ಹಾಕಿ ಕುದಿಸಿ. ನಂತರ ಅಕ್ಕಿ, ಉಪ್ಪು, ಒಂದು ಏಲಕ್ಕಿ, ಲವಂಗ ಮತ್ತು ಒಂದು ಟೀ ಚಮಚ ತುಪ್ಪ ಸೇರಿಸಿ, ಬೇಯಲು ಬಿಡಿ.
Advertisement
* ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಇಂಗು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬೇಯುತ್ತಿದ್ದಂತೆ ಏಲಕ್ಕಿ ಮತ್ತು ಬೇ ಎಲೆಯನ್ನು ಸೇರಿಸಿ. ಇದನ್ನೂ ಓದಿ : ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್
Advertisement
* ನಂತರ ಕ್ಯಾರೆಟ್, ಬೀನ್ಸ್, ಟೊಮೆಟೊ ಪೇಸ್ಟ್, ಅರಿಶಿಣ, ಉಪ್ಪು, ಬಟಾಣಿ, ಪುದೀನಾ, ಕೊತ್ತಂಬರಿ ಮತ್ತು ಮೊಸರನ್ನು ಸೇರಿಸಿ, ತರಕಾರಿಗಳು ಸ್ವಲ್ಪ ಮೃದುವಾಗುವವರೆಗೆ 2-3 ನಿಮಿಷಗಳ ಕಾಲ ಬೇಯಿಸಬೇಕು.
* ನಂತರ ಈ ಮೊದಲೆ ತಯಾರಿಸಿದ ಮಸಾಲೆ ಇರುವ ಪಾತ್ರೆಗೆ ತಪ್ಪ ಹಾಗೂ ಇನ್ನಿತರ ಮಸಾಲೆಯನ್ನು ಹಾಕಿ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ವೇಜ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.