ಶತಕ ಬಾರಿಸಿದ ಪೆಟ್ರೋಲ್ ಬೆಲೆ

Public TV
1 Min Read
Petrol

ಜೈಪುರ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತೈಲ ಬೆಲೆ ಇದೀಗ ರಾಜಸ್ಥಾನ ಮತ್ತು ಕೆಲ ರಾಜ್ಯಗಳಲ್ಲಿ 100 ರೂಪಾಯಿಗೆ ತಲುಪಿದೆ. ಈ ಮೂಲಕ ದೇಶದಲ್ಲಿ ತೈಲ ಬೆಲೆ ಶತಕ ಬಾರಿಸಿ ದಾಖಲೆ ನಿರ್ಮಿಸಿದೆ.

diesel petrol14032020 1c

ತೈಲ ಮಾರಾಟ ಕಂಪನಿಗಳು ಸತತ 9ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದೆ. ಪರಿಣಾಮ ಬ್ರ್ಯಾಂಡೆಡ್ ಪೆಟ್ರೋಲ್ ದರವು ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 100 ರೂಪಾಯಿ ಗಡಿದಾಟಿದೆ. ಇದರೊಂದಿಗೆ ದೇಶದಲ್ಲಿ ಮೊದಲ ಬಾರಿಗೆ 100 ರೂಪಾಯಿಗೆ ಪೆಟ್ರೋಲ್ ದುಬಾರಿಯಾಗಿದೆ.

ದೇಶದಲ್ಲೇ ಅತಿಹೆಚ್ಚಿನ ತೆರಿಗೆ ವ್ಯಾಟ್ ಇರುವ ರಾಜ್ಯವಾದ ರಾಜಸ್ಥಾನದಲ್ಲಿ ಪೆಟ್ರೋಲ್ 25 ಪೈಸೆ ಹೆಚ್ಚಳಗೊಂಡು ಲೀಟರ್‍ಗೆ 100.13 ರೂಪಾಯಿ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 89.54 ರೂಪಾಯಿಯಾದರೆ, ಮುಂಬೈನಲ್ಲಿ 96 ರೂಪಾಯಿ, ಬೆಂಗಳೂರಿನಲ್ಲಿ 92.54 ರೂಪಾಯಿಯಾಗಿದೆ. ಡೀಸೆಲ್ ಬೆಲೆ ದೆಹಲಿಯಲ್ಲಿ 79.95, ಬೆಂಗಳೂರಿನಲ್ಲಿ 84.75 ರೂಪಾಯಿ ಕಂಡುಬಂದಿದೆ.

Petrol Diesel Price 1

ದೇಶದಲ್ಲಿ ಕಳೆದ 9 ದಿನಗಳ ಅವಧಿಯಲ್ಲಿ ಒಂದೇ ಸಮನೆ ಏರಿಕೆಯತ್ತ ಮುಖ ಮಾಡಿರುವ ತೈಲ ಬೆಲೆ ಇಂದು ಒಂಬತ್ತು ದಿನಗಳ ಅವಧಿಗೆ ಒಟ್ಟು ಪೆಟ್ರೋಲ್ ದರ 2.54 ರೂಪಾಯಿ ಏರಿಕೆ ಕಂಡರೆ, ಡೀಸೆಲ್ 2.82 ರೂಪಾಯಿ ಹೆಚ್ಚಳಗೊಂಡಿದೆ.

ಇತ್ತ ಪ್ರತಿದಿನ ತೈಲ ಬೆಲೆ ಏರಿಕೆ ವಿರುದ್ಧ ಜನಸಾಮಾನ್ಯರು ಬಿದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದರು ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *