– 2 ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಓವರಿಗೆ 26 ರನ್ ಬಿಟ್ಟುಕೊಟ್ಟ ಸ್ಟೇನ್
ದುಬೈ: ಇಂದು ನಡೆಯುತ್ತಿರುವ ಐಪಿಎಲ್ 6ನೇ ಮ್ಯಾಚಿನಲ್ಲಿ ಕೆಎಲ್ ರಾಹುಲ್ ಅವರ ಮಿಂಚಿನ ಶತಕದಿಂದ ಪಂಜಾಬ್ ತಂಡ ಬೆಂಗಳೂರು ತಂಡಕ್ಕೆ 207 ಟಾರ್ಗೆಟ್ ನೀಡಿದೆ.
ಈ ಮ್ಯಾಚಿನಲ್ಲಿ ಅಬ್ಬರದ ಆಟವಾಡಿ ಮಿಂಚಿದ ಕನ್ನಡಿಗ ಕೆಎಲ್ ರಾಹುಲ್ ಅವರು, ಐಪಿಎಲ್‍ನಲ್ಲಿ ತನ್ನ ಎರಡನೇ ಶತಕವನ್ನು ದಾಖಲಿಸಿದರು. ದುಬೈ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ ರಾಹುಲ್, ಕೇವಲ 61 ಬಾಲಿನಲ್ಲಿ ಶತಕ ಸಿಡಿಸಿ ಮಿಂಚಿದರು. ಏಳು ಸಿಕ್ಸ್ ಮತ್ತು 15 ಫೋರ್ ಸಿಡಿಸಿ ರಾಹುಲ್ 69 ಎಸೆತಗಳಲ್ಲಿ ಬರೋಬ್ಬರಿ 132 ರನ್ ಚಚ್ಚಿದರು.
Advertisement
????
What an innings this by the @lionsdenkxip Skipper.
Take a bow, @klrahul11 pic.twitter.com/eHDDlVzTaJ
— IndianPremierLeague (@IPL) September 24, 2020
Advertisement
ಹೊಸ ದಾಖಲೆ ನಿರ್ಮಿಸಿದ ಕೆಲ್ ರಾಹುಲ್, ಐಪಿಎಲ್ ಇತಿಹಾಸದಲ್ಲೇ ಬಹುಬೇಗ ಎರಡು ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 2013ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್ ಕೇವಲ 60 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ 63 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರೈಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.
Advertisement
Advertisement
16ನೇ ಓವರ್ ಕೊನೆಯ ಬಾಲಿನಲ್ಲಿ ಕೆ.ಎಲ್ ರಾಹುಲ್‍ಗೆ ಜೀವದಾನ ಸಿಕ್ಕಿತು. ಡೇಲ್ ಸ್ಟೇನ್ ಅವರ ಎಸೆದ ಬಾಲನ್ನು ರಾಹುಲ್ ಲೆಗ್ ಸೈಡ್ ಕಡೆ ಹೊಡೆದರು. ಆಗ ಕೊಹ್ಲಿ ಅವರು ಕ್ಯಾಚ್ ಅನ್ನು ಬೌಂಡರಿ ಲೈನಿನಲ್ಲಿ ಕೈಚೆಲ್ಲಿದರು. ನಂತರ 17ನೇ ಓವರಿನ ಕೊನೆ ಬಾಲಿನಲ್ಲಿ ಮತ್ತೆ ಕೊಹ್ಲಿ ಅವರು ಕೆಎಲ್ ರಾಹುಲ್ ಅವರು ಸಿಂಪಲ್ ಕ್ಯಾಚ್ ಅನ್ನು ಡ್ರಾಪ್ ಮಾಡಿದರು.
ಪಂಜಾಬ್‍ಗೆ ತಂಡಕ್ಕೆ ಕೆ.ಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಬೆಂಗಳೂರು ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಅವರು ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 50 ರನ್ ಸೇರಿಸಿದರು. ಆದರೆ ಆರನೇ ಓವರಿನಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ಅವರು ಚಹಲ್ ಅವರು ಗೂಗ್ಲಿಗೆ ಬಲಿಯಾದರು.
Dube with another biggie.
Maxwell departs for 5.#KXIP 128/3 https://t.co/t6xPJ1XJRP #Dream11IPL pic.twitter.com/MUy6kuQDyo
— IndianPremierLeague (@IPL) September 24, 2020
ನಂತರ ನಿಕೋಲಸ್ ಪೂರನ್ ಅವರ ಜೊತೆ ಸೇರಿಕೊಂಡು ಉತ್ತಮವಾಗಿ ಕೆ.ಎಲ್ ರಾಹುಲ್ ಬ್ಯಾಟ್ ಬೀಸಿದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಪಂಜಾಬ್ ತಂಡ ಒಂದು ವಿಕೆಟ್ ಕಳೆದುಕೊಂಡು 90 ರನ್ ಪೇರಿಸಿತು. ಈ ವೇಳೆ 36 ಬಾಲಿಗೆ ನಾಯಕ ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದರು. ನಂತರ ಉತ್ತಮವಾಗಿ ಆಡಿದ ಪೂರನ್ ಮತ್ತು ರಾಹುಲ್ ಕೇವಲ 37 ಎಸೆತದಲ್ಲಿ ಅರ್ಧಶತಕದ ಜೊತೆಯಾಟವಾಡಿದರು.
ICYMI – Chahal bamboozles Mayank.
Beauty of a delivery to get the in form batsman Mayank Agarwal. This one is a @yuzi_chahal special to rattle the stumps.
Full video https://t.co/WzAHo0mMvN #Dream11IPL #KXIPvRCB
— IndianPremierLeague (@IPL) September 24, 2020
ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ನಿಕೋಲಸ್ ಪೂರನ್ ಅವರು 17 ರನ್ ಗಳಿಸಿ ಎಬಿ ಡಿವಿಲಿಯರ್ಸ್ ಹಿಡಿದ ಉತ್ತಮ ಕ್ಯಾಚ್‍ಗೆ ಬಲಿಯಾದರು. ನಂತರ ದುಬೆಯವರ ಓವರಿನಲ್ಲಿ ಫಿಂಚ್ ಹಿಡಿದ ಸೂಪರ್ ಕ್ಯಾಚಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ರಾಹುಲ್ ಮತ್ತು ಕರಣ್ ಕೊನೆಯ ಎರಡು ಓವರಿನಲ್ಲಿ 49 ರನ್ ಸಿಡಿಸಿ ಪಂಜಾಬ್ ತಂಡವನ್ನು 200 ರನ್‍ಗಳ ಗಡಿ ದಾಟಿಸಿದರು.