ಬೆಂಗಳೂರು: ವ್ಯಾಕ್ಸಿನ್ ಸೆಂಟರ್ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದ್ದು, ಲಸಿಕೆಗಾಗಿ ಮತ್ತೆ ಹಾಹಾಕಾರ ಶುರುವಾಗಿದೆ.
Advertisement
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಜನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲಾ ಮೈದಾನದಲ್ಲಿ ವ್ಯಾಕ್ಸಿನ್ ಸೆಂಟರ್ ತೆರೆಯಲಾಗಿತ್ತು. ಇದನ್ನೂ ಓದಿ: ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?
Advertisement
Advertisement
ಮಂಗಳವಾರ ಕೇವಲ 200 ಜನರಿಗೆ ಡೋಸ್ ನೀಡಿದ್ದು, ಇಂದು ಸ್ಟಾಕ್ ಬಂದಿಲ್ಲ. ಗೇಟ್ ಮುಂಭಾಗದಲ್ಲಿ ನೋ ಸ್ಟಾಕ್ ಅನ್ನೋ ಬೋರ್ಡ್ ಹಾಕಿದ್ದಾರೆ. ಇಂದು ಬೆಳಗ್ಗೆಯೇ ಲಸಿಕೆಗಾಗಿ ಸಾಲುಗಟ್ಟಿ ನಿಂತಿದ್ದ ಜನ 9 ಗಂಟೆಗೆ ನೋ ಸ್ಟಾಕ್ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ನಿನ್ನೆಯೇ ನೋ ಸ್ಟಾಕ್ ಬೋರ್ಡ್ ಹಾಕಬೇಕು ಅಥವಾ ಯಾರಾದ್ರು ಸಿಬ್ಬಂದಿ ಇವತ್ತು ಸ್ಟಾಕ್ ಇಲ್ಲ ಅಂತ ಹೇಳಲು ನಿಯೋಜಿಸಬೇಕು. ನಾವೆಲ್ಲ ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೇವೆ ಈಗ ನೋ ಸ್ಟಾಕ್ ನಾಳೆ ಬನ್ನಿ ಅಂದ್ರೆ ಹೇಗೆ ಅಂತಾ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್
Advertisement
ಮಂಗಳವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಾಕ್ಸಿನ್ ಕೊರತೆಯನ್ನು ಒಪ್ಪಿಕೊಂಡಿದ್ದರು. ಆದ್ರೆ ಮಧ್ಯಾಹ್ನ ಉಲ್ಟಾ ಹೊಡೆದ ಸಚಿವರು ವ್ಯಾಕ್ಸಿನ್ ಇರೋದಾಗಿ ಹೇಳಿಕೆ ನೀಡಿದ್ದರು.