Connect with us

ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

ಬಿಗ್ ಬಾಸ್ ಮನೆಯಲ್ಲಿ ಈ ವಾರದ ನಾಯಕರಾಗಿರುವ ಅರವಿಂದ್ ಒಂದೇ ಒಂದು ಡೈಲಾಗ್‌ನಿಂದ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಅವರನ್ನು ತಿವಿದು ಫುಲ್ ಕ್ಲಾಸ್ ಮಾಡಿದ್ದಾರೆ.

ಕಳೆದ ವಾರದ ಕಳಪೆ ಮತ್ತು ಅತ್ಯುತ್ತಮ ಆಟಗಾರ ಆಯ್ಕೆ ನಡೆಯುತ್ತಿತ್ತು. ಹಾಸ್ಟೆಲ್ ಟಾಸ್ಕ್ ನಲ್ಲಿ ವಾರ್ಡನ್‌ಗಳಾಗಿದ್ದ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಜೊತೆ ದಿವ್ಯಾ ಸುರೇಶ್ ಅವರನ್ನು ಮನೆ ಸದಸ್ಯರು ಕಳಪೆಗೆ ನಾಮಿನೆಟ್ ಮಾಡಿದರು.

ಕೊನೆಗೆ ನಾಯಕನ ಸರದಿ ಬಂತು. ಈ ವೇಳೆ ಅರವಿಂದ್, “ನಾನು ನಿಧಿಗೆ ಕಳಪೆ ಕೊಡುತ್ತೇನೆ. ನಾನು ತುಂಬಾ ಫೇತ್ ಇಟ್ಟಿದ್ದೆ. ಹೀಗೆ ಆಗಲ್ಲ ಅಂತ. ಹೇಗೆ ಎಕ್ಸ್ಪ್ರೆಸ್ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಬಹಳ ಬೇಸರವಾಯ್ತು. ನನ್ನ ಲೆಕ್ಕದಲ್ಲಿ ಮೂವರು ಇದ್ದಾರೆ. ಟಾಸ್ಕ್ ಅಂತ ಬಂದಾಗ ನೀವು ಸ್ಟ್ರಾಟಜಿ ಅಂತೀರಾ. ಆದರೆ ತಂತ್ರಗಾರಿಕೆ ಮಾಡಬೇಕು. ಆದರೆ ಕುತಂತ್ರ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಮೋಸದಾಟ ಮಾಡಬಾರದು” ಎಂದು ಹೇಳಿ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಅವರನ್ನು ನೇರವಾಗಿ ಕಟು ಮಾತಿನಲ್ಲೇ ತಿವಿದರು. ಇದನ್ನೂ ಓದಿ: ಮಾತಿನ ಮಧ್ಯೆ ಮೂಗು ತೂರಿಸಿದ ದಿವ್ಯಾ ಸುರೇಶ್‍ಗೆ ತರಾಟೆ ತೆಗೆದುಕೊಂಡ ಅರವಿಂದ್!

ಅಂತಿಮವಾಗಿ ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್ ಸಂಬರಗಿ ಪರವಾಗಿ 5 ವೋಟುಗಳು ಬಿದ್ದ ಹಿನ್ನೆಲೆಯಲ್ಲಿ ನಾಯಕನ ವಿಶೇಷ ಅಧಿಕಾರ ಚಲಾಯಿಸಿದ ಅರವಿಂದ್ ನಿಧಿ ಅವರನ್ನು ‘ಕಳಪೆ’ಗೆ ಆಯ್ಕೆ ಮಾಡಿದರು. ಉತ್ತಮ ಪತ್ರಗಳನ್ನು ಬರೆದ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಾರದ ‘ಅತ್ಯುತ್ತಮ’ ಆಟಗಾರನಾಗಿ ಮನೆಯ ಸದಸ್ಯರು ಆಯ್ಕೆ ಮಾಡಿದರು.

ಲವ್ ಲೆಟರ್ ಟಾಸ್ಕ್ ನಲ್ಲಿ ನಿಧಿಯ ಡೀಲ್ ಒಪ್ಪಿ ದಿವ್ಯಾ ಸುರೇಶ್ ಮತ್ತು ಮಂಜು ಈಗ ಮನೆಯ ಸದಸ್ಯರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೆಚ್ಚು ಲವ್ ಲೆಟರ್ ಸಂಗ್ರಹ ಮಾಡಿದ್ದ ನಿಧಿ ಸುಬ್ಬಯ್ಯ ಮತ್ತು ದಿವ್ಯಾ ಸುರೇಶ್ ಕ್ಯಾಪ್ಟನ್ಸಿ ಟಾಸ್ಕ್ ಗೆ ಬಂದರೂ ಈಗ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ಕುತಂತ್ರ ಆಟವಾಡಿದ ದಿವ್ಯಾ ಸುರೇಶ್ ಮತ್ತು ಮಂಜು ಮನೆಯವರ ಜೊತೆ ಸ್ವಾರಿ ಕೇಳಿದ್ದಾರೆ. ಸ್ವಾರಿ ಕೇಳಿದ್ದರೂ ಮನೆಯವರ ಸಂಬಂಧ ಅಷ್ಟೇನೂ ಉತ್ತಮವಾದಂತೆ ಕಾಣುತ್ತಿಲ್ಲ.

Advertisement
Advertisement

ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

Advertisement