ವೈಷ್ಣವಿ ಕೆಲಸಕ್ಕೆ ಅರವಿಂದನ ಮೆಚ್ಚುಗೆಯ ಚಪ್ಪಾಳೆ

Public TV
2 Min Read
Aravind KP praises vaishnavi gowda main

ದೊಡ್ಮನೆಯಲ್ಲಿ ‘ಜೀವನವೇ ಶೂನ್ಯ’ ಎಂದು ಹೇಳುತ್ತಾ ಮನೆ ಮಂದಿಗೆ ಆಗಾಗ ಒಂದು ಸಾಲಿನ ಜೋಕ್ ಹೇಳಿ ನಗಿಸುತ್ತಿದ್ದ ವೈಷ್ಣವಿ ಅವರ ಕೆಲಸವನ್ನು ಅರವಿಂದ್ ಹಾಡಿ ಹೊಗಳಿದ್ದಾರೆ.

ಪ್ರಶಾಂತ್ ಸಂಬರಗಿ ಮತ್ತು ಅರವಿಂದ್ ಗಾರ್ಡನ್ ಏರಿಯಾದಲ್ಲಿ ಕುಳಿತು ಕಿಚನ್ ಡಿಪಾರ್ಟ್‍ಮೆಂಟ್ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ,”ಡೈನಿಂಗ್ ಟೇಬಲ್‍ನಲ್ಲಿ ಕುಳಿತು ಮಾತನಾಡುವುದು ಬಹಳ ಸುಲಭ. ಕೆಲಸ ಮಾಡುವಾಗ ಏನು ಕಷ್ಟ ಅನ್ನೋದು ಗೊತ್ತಾಗುತ್ತದೆ”ಎಂದು ಅರವಿಂದ್ ಹೇಳುತ್ತಾರೆ.

bb aravind prashanth sambargi 2

 

ಇದಕ್ಕೆ ಪ್ರಶಾಂತ್ ಸಂಬರಗಿ,”ಹೌದು. ಬೆಳಗ್ಗೆ 6:30ಕ್ಕೆ ಎದ್ದು ಮಾಡುತ್ತಿದ್ದಳು” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ. ತನ್ನ ಮಾತನ್ನು ಮುಂದುವರಿಸಿದ ಅರವಿಂದ್,”ನಾವು ಏಳುತ್ತಲೇ ಇರಲಿಲ್ಲ. ಅರ್ಧ ಮುಕ್ಕಾಲು ಗಂಟೆಯ ಮೊದಲೇ ಕೆಲಸ ಮಾಡಿ ಮುಗಿಸುತ್ತಿದ್ದಳು. ಇಷ್ಟು ಮಾಡಿಯೂ ಬಾತ್ ರೂಂ ಕೊಡುತ್ತಿರಲಿಲ್ಲ. ಒಬ್ಬರನ್ನು ದೂರುವುದು ಸುಲಭ. ಆದರೆ ಅವರ ಕಷ್ಟ ಯಾರಿಗೂ ಗೊತ್ತಾಗುವುದಿಲ್ಲ. ದೂರು ಕೊಟ್ಟವರಿಗೆ ಈಗ ಗೊತ್ತಾಗುತ್ತಿರಬಹುದು. ಯಾರೂ ಇಲ್ಲಿ ಸರ್ವಿಸ್ ಮಾಡಲು ಬಂದಿಲ್ಲ. ಮನೆಯಲ್ಲಿ ಎಲ್ಲ ರೀತಿಯ ಮಕ್ಕಳು ಇರುತ್ತಾರೆ. ಹೊಂದಾಣಿಕೆ ಮಾಡಿಕೊಂಡು ಹೋಗಬೇಕು” ಎಂದು ಹೇಳಿ ವೈಷ್ಣವಿ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ.

divya aravid vaishnavi 3

ಅರವಿಂದ್ ವೈಷ್ಣವಿ ಅವರನ್ನು ಹೊಗಳಲು ಕಾರಣವಿದೆ. ದೊಡ್ಮನೆಯಲ್ಲಿ ವೈಷ್ಣವಿ, ರಘು, ದಿವ್ಯಾ, ಅರವಿಂದ್ ಹೆಚ್ಚಾಗಿ ಕಿಚನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಮಂದಿಯೂ ಬಹಳ ಹೊಂದಾಣಿಕೆಯಿಂದ ಎಲ್ಲ ಅಡುಗೆ ಕೆಲಸಗಳನ್ನು ಮಾಡುತ್ತಿದ್ದರು. ವೈಷ್ಣವಿ, ದಿವ್ಯಾ ಆಗಬಹುದು. ರಘು, ಅರವಿಂದ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬಂದಿರಲಿಲ್ಲ.

divya aravid vaishnavi 4

ವೈಷ್ಣವಿ ಮತ್ತು ದಿವ್ಯಾ ಅಡುಗೆ ಮಾಡುತ್ತಿದ್ದರೆ ಅರವಿಂದ್, ರಘು ಇತರ ಕೆಲಸವನ್ನು ಮಾಡಿ ಟಾಸ್ಕ್ ಇದ್ದರೂ ಸರಿಯಾದ ಸಮಯಕ್ಕೆ ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ತಯಾರು ಮಾಡುತ್ತಿದ್ದರು. ಅದರಲ್ಲೂ ದಿವ್ಯಾ ಮತ್ತು ವೈಷ್ಣವಿ ಇಬ್ಬರು ಒಂದೇ ವಯಸ್ಸಿನವರಾಗಿದ್ದರು. ಇಬ್ಬರನ್ನು ಬಿಗ್‍ಬಾಸ್ ವೀಕ್ಷಕರು ಅಕ್ಕ ತಂಗಿಯರಿಗೆ ಹೋಲಿಸುತ್ತಿದ್ದರು. ಅನಾರೋಗ್ಯ ಬಂದಾಗಲೂ ಅರವಿಂದ್ ಜೊತೆ ದಿವ್ಯಾ ಅವರನ್ನು ವೈಷ್ಣವಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಮಂದಿಯೂ ಕೆಲಸ ಮುಗಿಸಿದ ಮೇಲೆ ಸ್ವಚ್ಛವಾಗಿ ಕಿಚನ್ ಇಡುತ್ತಿದ್ದರು. ವಾರದ ರೇಷನ್‍ಗೆ ಸಮಸ್ಯೆ ಆಗದಂತೆ ಕೆಲಸ ಮುಗಿಸುತ್ತಿದ್ದರು. ಈ ಕಾರಣಕ್ಕೆ ಅರವಿಂದ್ ಅವರು ವೈಷ್ಣವಿಯ ಕೆಲಸವನ್ನು ನೋಡಿ ಪ್ರೀತಿಯಿಂದ ಚಪ್ಪಾಳೆ ಹೊಡೆದಿದ್ದಾರೆ.

divya vaishnavi gowda

ಟಾಸ್ಕ್ ಮುಗಿದ ನಂತರ ಎಲ್ಲರಿಗೂ ಹಸಿವಾಗಿರುತ್ತದೆ. ಈ ವೇಳೆ ಊಟ ಆಯ್ತಾ? ಇನ್ನು ಎಷ್ಟು ಹೊತ್ತು ಬೇಕು? ಎಂದು ಆಗಾಗ ವೈಷ್ಣವಿಗೆ ಪ್ರಶ್ನೆ ಕೇಳುತ್ತಿರುತ್ತಾರೆ. ಹೀಗೆ ಸ್ಪರ್ಧಿಗಳು ಕೇಳುತ್ತಿದ್ದರೂ ವೈಷ್ಣವಿ ಸಮಾಧಾನದಿಂದ ಉತ್ತರ ನೀಡಿ ಎಲ್ಲವನ್ನು ನಿಭಾಯಿಸುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಅವರನ್ನು ‘ಅನ್ನಾದಾತೆ’ ಎಂದು ಕರೆಯುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *