ಬಿಗ್‍ಬಾಸ್‍ನ ವಾರದ ಕಥೆ ಕಿಚ್ಚ ಸುದೀಪ್ ಜೊತೆಗೆ ಸಂಚಿಕೆಯಲ್ಲಿ ಮಂಜುರವರಿಗೆ ಮನೆಯಲ್ಲಿರುವ 12 ಸ್ಪರ್ಧಿಗಳನ್ನು 12 ತಿಂಡಿಗಳ ಹೆಸರಿಗೆ ಸೂಚಿಸುವಂತೆ ಸುದೀಪ್ ಸೂಚಿಸಿದ್ದರು. ಅದರಂತೆ ಮಂಜು ಮೊದಲಿಗೆ ವೈಷ್ಣವಿಯವರ ಹೆಸರನ್ನು ಉಪ್ಪಿಟ್ಟಿಗೆ ಸೂಚಿಸಿ, ಕಾರಣ ಬೋರಿಂಗ್, ಅರ್ಜೆಂಟ್‍ಗೆ ಉಪ್ಪಿಟು ಬೇಕಾಗಬಹುದು, ಇಲ್ಲವಾದಲ್ಲಿ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಪ್ರಶಾಂತ್ ಸಂಬರಗಿ ಚಪಾತಿ, ಯಾವಾಗಲೂ ತಿನ್ನಬೇಕು ಅನಿಸುವುದಿಲ್ಲ. ಆದರೆ ಯಾವಾಗಲಾದರೂ ತಿನ್ನಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ವೇಳೆ ಸುದೀಪ್ ಚಪಾತಿಗೆ ಅಂತಾನೇ ಯಾವುದು ಇಲ್ಲ. ಆದರೆ ಅದರೊಂದಿಗೆ ಏನು ಸರ್ವ್ ಮಾಡುತ್ತೇವೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಅಲ್ಲದೇ ಚಪಾತಿಗೆ ತಟ್ಟಿ, ತಟ್ಟಿ ರುಬ್ಬಿಸಿಕೊಂಡು ಅಭ್ಯಾಸ ಇದೆ ಎಂದು ಹಾಸ್ಯಮಾಡುತ್ತಾರೆ.
Advertisement
ನಂತರ ಕೇಸರಿ ಬಾತ್ ಪ್ರಿಯಾಂಕ, ನೋಡಲು ಲಕ್ಷಣವಾಗಿದ್ದು ಸುಂದರವಾಗಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಬಳಿಕ ದಿವ್ಯಾ ಸುರೇಶ್ ಬಿಸಿಬೇಳೆ ಬಾತ್‍ಗೆ ಕಾರಣ ಮೇಲೆ ಬೂಂದಿ ಹಾಕಿಕೊಂಡು ತಿನ್ನಬೇಕು. ಒಂದು ರೀತಿ ತಿನ್ನಲು ಬಿಸಿಬಿಸಿಯಾಗಿ ಚೆನ್ನಾಗಿರುತ್ತದೆ. ಚಕ್ರವರ್ತಿ ಕೇರಳ ಪರೋಟ ಅದು ಒಂದು ರೀತಿ ಲೇಯರ್ ಪರೋಟ ಮೇಲಕ್ಕೆ ಎತ್ತಿದರೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ. ಆಗ ಸುದೀಪ್ ಲೇಯರ್ ಪರೋಟ ಮುಗಿಯಿತು ಎಂದರೆ ಮೇಲಕ್ಕೆ ಬರುತ್ತಾನೆ ಇರುತ್ತದೆ. ಉದಾಹರಣೆ ವಾದ ಮುಗಿಯಿತು ಎಂದರೆ ಇನ್ನೊಂದು ಬರುತ್ತಲೇ ಇರುತ್ತದೆ ಎಂದು ನಗುತ್ತಾರೆ.
Advertisement
Advertisement
ರಘು ಒಂದು ರೀತಿ ಡ್ರೈ ಜಾಮೂನ್ ಇದ್ದಂತೆ. ನೋಡಲು ಒರಟಾಗಿ ಚೆನ್ನಾಗಿ ಕಾಣಿಸುವುದಿಲ್ಲ ತಿನ್ನಬೇಕು ಎಂದು ಕೂಡ ಅನಿಸುವುದಿಲ್ಲ. ಆದ್ರೆ ತಿಂದ ನಂತರ ಚೆನ್ನಾಗಿರುತ್ತದೆ. ಇನ್ನೂ ನಿಧಿ ಮೆಣಸಿನ ಕಾಯಿ ಬಜ್ಜಿ ನೋಡಲು ಮೇಲೆ ಕಡಲೆ ಹಿಟ್ಟಿನ ರೀತಿ ಇರುತ್ತದೆ. ಯಾಮಾರಿದರೆ ಒಳಗಡೆ ಮೆಣಸಿನಕಾಯಿ ಭಾರೀ ಘಾಟು. ಅವರ ಪಕ್ಕ ಕೂರುವುದಿರಲಿ ಅಕ್ಕ-ಪಕ್ಕದಲ್ಲಿರುವವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿಬಿಡುತ್ತಾರೆ ಎನ್ನುತ್ತಾರೆ.
Advertisement
ಶುಭ ತಂಬಿಟ್ಟು, ಎಷ್ಟು ಸಲ ಬೆಕಾದರೂ ತಿನ್ನಬಹುದು ಬೇಜಾರಾದಾಗ ಉಗಿಯಬಹುದು. ಅಂದರೆ ಬರೀ ಹಿಟ್ಟು-ಹಿಟ್ಟೆ ಸಿಗುತ್ತದೆ. ತಂಬಿಟ್ಟು ತಿನ್ನಲು ಚೆಂದ, ಉಗಿಯಲು ಕೂಡ ಚೆಂದ ಅಂದಾಗ, ಸುದೀಪ್ ಒಳ್ಳೆ ಟೈಂ ಪಾಸ್ ಸಿರಿಯಸ್ ಊಟ ಕೂಡ ಅಲ್ಲ ಅಂತ ಕೇಳುತ್ತಾರೆ. ಆಗ ಮಂಜು ಊಟನೂ ಅಲ್ಲ. ಸ್ನಾಕ್ಸ್ ಕೂಡ ಅಲ್ಲ ಎಂದು ಹೇಳುತ್ತಾರೆ.
ಇಡ್ಲಿ ದಿವ್ಯಾ ಉರುಡುಗ ಕಾರಣ ಅದನ್ನು ಬೇಗ ತಿಂದು ಹೋಗಿಬಿಡಬಹುದು. ಇಡ್ಲಿಗೆ ಚಟ್ನಿ ಅಥವಾ ಸಂಬಾರ್ ಇರಬೇಕು ಆಗಲೆ ಅದಕ್ಕೆ ಬೆಲೆ. ಅರವಿಂದ್ ಪೂರಿ, ಕಾರಣ ಅದು ಸಿಂಗಲ್ ಅದಕ್ಕೂ ಏನಾದರೂ ಬೇಕು ಎನ್ನುತ್ತಾರೆ. ಈ ವೇಳೆ ಇಡ್ಲಿ ಹಾಗೂ ಪೂರಿ ಒಳ್ಳೆ ಕಾಂಬಿನೇಷನ್ ಅಲ್ವಾಲ್ಲ ಎಂದು ಸುದೀಪ್ ಪ್ರಶ್ನಿಸಿದಾಗ, ಇಡ್ಲಿಗೂ ಸಾಗು, ಚಟ್ನಿ ಹಾಕಬಹುದು, ಪೂರಿಗೂ ಸಾಗು ಚಟ್ನಿ ಹಾಕಬಹುದು. ಒಂದರಲ್ಲೇ ಎರಡು ನಡೆಯುತ್ತದೆ.
ಹಪ್ಪಳ ಬಂದು ಶಮಂತ್ ಎಂದಾಗ ಸುದೀಪ್ ಎರಡು ಐಟಂ ಮಧ್ಯೆ ಅದನ್ನು ಎಷ್ಟು ಬಾರಿ ಕೇಳಿದರು ಹಾಕುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಹೊಟ್ಟೆ ಬಿರಿಯುವಂತೆ ನಕ್ಕಿದ್ದಾರೆ. ನಂತರ ದಿವ್ಯಾ ಸುರೇಶ್ ಚಕ್ರವರ್ತಿ ಹಾಗೂ ಶಮಂತ್ ಮನೆಮಂದಿ ಎಲ್ಲ ರಾಗಿ ಮುದ್ದೆ, ರಾಗಿ ರೊಟ್ಟಿಗೆ ಮಂಜುರನ್ನು ಹೋಲಿಸಿದ್ದಾರೆ.