ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲಿಯೇ ಬೆಳೆದ ರಘು, ನಿನ್ನೆ ವೈಷ್ಣವಿ ಬಳಿ ತಮ್ಮ ತಾಯಿಯ ಬಗ್ಗೆ ಮಾತನಾಡಿ ನೋವನ್ನು ಹಂಚಿಕೊಂಡಿದ್ದಾರೆ.
ವೈಲ್ಡ್‍ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ ಚಂದ್ರಚೂಡ ಚಕ್ರವರ್ತಿ, ನಿನ್ನೆ ರಘು ಜೊತೆ ನಿಮ್ಮ ಹೃದಯದಲ್ಲಿ ನಿಮ್ಮ ತಾಯಿಗೆ ಹೇಳಬೇಕಾದ ಬಹಳ ವಿಚಾರವಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಯಾರಾದರೂ ಬಳಿ ಇಲ್ಲಿಯವಗೂ ಹೇಳಿಕೊಂಡಿದ್ದೀರಾ? ನಿಮಗೆ ನಿಮ್ಮ ಒಳಗಿರುವ ನೋವನ್ನು ಕರಗಿಸಿಕೊಳ್ಳಬೇಕು ಎಂಬ ಆಸೆ ಇದ್ಯಾ? ಎಂದು ಪ್ರಶ್ನಿಸುತ್ತಾರೆ.
ಆಗ ರಘು ಹೌದು ಎಂದಾಗ, ವೈಷ್ಣವಿಯವರ ಕಣ್ಣನ್ನು ನೋಡಿಕೊಂಡು ನಿಮ್ಮ ತಾಯಿಯನ್ನು ಹುಡುಕಿ, ಹಾಗೇನಾದರೂ ನಿಮ್ಮ ತಾಯಿಯ ಭಾವನೆ ಅವರಲ್ಲಿ ಕಂಡರೆ ನಿಮ್ಮ ತಾಯಿ ಬಳಿ ಹೇಳಿಕೊಳ್ಳಬೇಕೆಂದು ಕೊಂಡಿದ್ದನ್ನೆಲ್ಲಾ ಹೇಳಿಕೊಳ್ಳಿ ಎಂದು ತಿಳಿಸುತ್ತಾರೆ.
ಬಳಿಕ ವೈಷ್ಣವಿ ನೋಡುತ್ತಾ ರಘು, ನಿನ್ನ ಕೋಪ, ಅಸಹಾಯಕತೆ, ಬೇಸರ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗಬಹುದಿತ್ತೇನೋ ಆದರೆ ನನಗೆ ಅದು ತಿಳಿಯಲಿಲ್ಲ. ನೀನು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿದ್ದವು. ಒಂದು ಸಮಯದಲ್ಲಿ ನನ್ನನ್ನು ನೀನು ಬೇಡ ಅಂದೇ, ದರಿದ್ರ, ಅನಿಷ್ಟ ಎಂದೇ ಅದನ್ನು ನಾನು ಅರ್ಥಮಾಡಿಕೊಂಡೆ, ಒಮ್ಮೊಮ್ಮೆ ನೀನು ಸತ್ತಿದ್ದೆ ನನಗೆ ಬೆಸ್ಟ್ ಎಂದು ಕೂಡ ಅನಿಸಿತ್ತು. ಯಾಕೆಂದರೆ ನಾನು 14-15 ವರ್ಷಗಳ ಹಿಂದೆ ನೋಡಿದ ಅಮ್ಮನಂತೆ ನೀನು ಇರಲಿಲ್ಲ. ನೀನು ತುಂಬಾ ಸ್ಟ್ರಾಂಗ್ ಆಗಿದ್ದೆ, ತುಂಬಾ ನಗುತ್ತಿದ್ದೆ, ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಆದರೆ ಸಾಯುವ ಕೊನೆಯ ಮೂರು ತಿಂಗಳ ಹಿಂದೆ ನೀನು ಯಾಕೆ ಹಾಗೇ ಆದೆ ಎಂದು ನಿನಗೆ ಮಾತ್ರ ಗೊತ್ತು. ಪ್ರತಿ ಬಾರಿ ನೀನು ನನಗೆ ಹುಚ್ಚು ಹಿಡಿದಂತೆ ಆಗುತ್ತಿದೆ. ನನಗೆ ಸಾಯುವುದಕ್ಕೂ ಇಷ್ಟವಾಗುತ್ತಿಲ್ಲ ರೋಡಿಗೆ ಹೋಗುತ್ತೇನೆ ನಾನು ಹುಚ್ಚಿಯಾಗುತ್ತೇನೆ ಎಂದಾಗ ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿರಲಿಲ್ಲ.
ನನಗೆ ಎಷ್ಟೋ ಬಾರಿ ನಿನ್ನನ್ನು ಸಾಯಿಸಿ ನಾನು ಸಾಯಬೇಕು ಎಂದುಕೊಂಡಿದ್ದೆ. ಆದರೆ ಆ ಧೈರ್ಯ ನನಗೆ ಇರಲಿಲ್ಲ ಎಂದು ಕಣ್ಣೀರಿಟ್ಟರು. ನೀನು ಹುಟ್ಟಿದ ಮೇಲೆ ಹೀಗಾದೆವು ಎಂದರೆ ನಾನೇನು ತಪ್ಪು ಮಾಡಿದ್ದೇ. ನೀನು ಏನು ಮಾಡಿದ್ದರೂ ನಾನು ಪ್ರಾಣಕ್ಕಿಂತ ನಿನ್ನನ್ನು ಇಷ್ಟಪಡುತ್ತಿದ್ದೆ. ಮುಂದೆಯೂ ಹೀಗೆ ಇಷ್ಟ ಪಡುತ್ತೇನೆ. ನೀನು ಏನು ಕಷ್ಟಪಟ್ಟಿದ್ಯೋ ಅದು ಯಾರಿಗೂ ಆಗಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ನೋವನ್ನು ವೈಷ್ಣವಿ ಬಳಿ ತೋಡಿಕೊಳ್ಳುತ್ತಾರೆ.
ನಂತರ ವೈಷ್ಣವಿ ನಿಮ್ಮ ತಂದೆ-ತಾಯಿಗೆ ಏನು ನೋವಿತ್ತು ಎಂಬುವುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮೊದಲನೇಯದಾಗಿ ನಾವು ಅವರನ್ನು ಗೌರವಿಸಬೇಕು. ಇಂದಿನಿಂದ ನೀವು ಬದಲಾಗಿ ಎಲ್ಲವನ್ನು ಮರೆತು ಚೆನ್ನಾಗಿ ಬದುಕಿ ಎಂದು ಸಮಾಧಾನ ಪಡಿಸುತ್ತಾರೆ.