ಬೆಂಗಳೂರು: ಬಿಗ್‍ಬಾಸ್ ಮನೆಗೆ ಹೊಸ ಅತಿಥಿಯ ಆಗಮನವಾಗಿ ಎರಡೂವರೆ ದಿನ ಕಳೆದಿದೆ. ಈ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿಯಾದ ವ್ಯಕ್ತಿಯ ಕುರಿತು ಅಭಿಪ್ರಾಯ ತಿಳಿಸಿ ಎಂದಾಗ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ನನ್ನ ನಿರೀಕ್ಷೆ ಬೇರೆನೇ ಇತ್ತು ಎನ್ನುವ ಮೂಲಕ ಮಂಜು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.
ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮನೆಯಲ್ಲಿರುವ ಕೆಲವರಲ್ಲಿ ಅಸಮಾಧಾನ ಇದೆ. ಯಾರಿಗೆಲ್ಲ ಅಸಮಾಧಾನ ಇದೆ ತಮ್ಮ ಕೈಗಳನ್ನು ಮೇಲೆತ್ತಿ ಕಾರಣ ಕೊಡಿ ಎಂದರು. ಈ ವೇಳೆ ದಿವ್ಯ ಉರುಡುಗ, ವಿಶ್ವ ಮತ್ತು ಮಂಜು ಅವರು ಅಸಮಾಧಾನದ ಕುರಿತು ಕಾರಣ ತಿಳಿಸಲು ಮುಂದಾದರು. ಈ ವೇಳೆ ಮಂಜು ತನ್ನ ಸರದಿ ಬಂದಾಗ ನನ್ನ ನಿರೀಕ್ಷೆ ಯಾರದ್ರು ಹುಡುಗಿ ಬರಬಹುದ ಎಂದು ಇತ್ತು ಎಂದರು. ಈ ವೇಳೆ ಇತರ ಸ್ಪರ್ಧಿಗಳು ನಗಲು ಪ್ರಾರಂಭಿಸಿದರು.
ನಂತರ ಕಿಚ್ಚ ನಿಮಗೆ ಬಿಗ್‍ಬಾಸ್ ಯಾವರೀತಿ ಕಾಣಿಸುತ್ತಿದೆ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮಂಜು, ಐದು ಜನ ಹುಡುಗಿಯರು ಈಗಾಗಲೇ ಬಿಗ್ ಮನೆಯಲ್ಲಿ ಇದ್ದಾರೆ. ಅವರೊಂದಿಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಒಬ್ಬರು ಹುಡುಗಿ ಬಂದಿದ್ದರೆ ಹುಡುಗಿಯರ ಮಧ್ಯೆ ಅಲ್ಲೋಲಕಲ್ಲೋಲ ಆಗಬಹುದಿತ್ತೋ ಏನೋ ಎಂದರು.
ನಂತರ ಮಾತು ಮುಂದುವರಿಸಿದ ಮಂಜು ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಓಡಾಡಿಕೊಂಡು ಚೆನ್ನಾಗಿ ಇರುತ್ತಾರೆ. ನಮಗೆ ನೋಡಲು ಚೆನ್ನಾಗಿರುತ್ತದೆ ಎಂದರು. ಇದಕ್ಕೆ ಮರು ಪ್ರಶ್ನೆ ಹಾಕಿದ ಅಭಿನಯ ಚಕ್ರವರ್ತಿ, ಇಷ್ಟು ಜನರಲ್ಲಿ ನಿಮಗೆ ಯಾರು ಓಡಾಡಿಕೊಂಡಿದ್ದರೆ ಖುಷಿಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಮಂಜು ದಿವ್ಯ ಸುರೇಶ್ ಓಡಾಡಿಕೊಂಡಿದ್ದರೆ ಖುಷಿಯಾಗುತ್ತದೆ ಎಂದರು.
ಬಿಗ್‍ಮನೆಯ ವೈಲ್ಡ್ ಕಾರ್ಡ್ ಎಂಟ್ರಿ ಕೆಲವರಿಗೆ ಖುಷಿಕೊಟ್ಟರೆ ಕೆಲವಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಭಿನ್ನಾಭಿಪ್ರಾಯವನ್ನು ಯಾವರೀತಿ ಸ್ಪರ್ಧಿಗಳು ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.