ಸೋಂಕು ವ್ಯಾಪಾಕವಾಗಿ ಹಬ್ಬಿದ ಹಿನ್ನೆಲೆಯಲ್ಲಿ ಜನರ ಜೀವನ ಶೈಲಿ ಬದಲಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಹೀಗಿರುವಾಗ ವರ ತನ್ನ ಮದುವೆ ಸಮಯದಲ್ಲಿಯೂ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡುತ್ತೀರುವ ವೀಡಿಯೋ ವೈರಲ್ ಆಗಿದೆ.
ಇಲ್ಲೊಬ್ಬರು ವರ ತನ್ನ ಮದುವೆ ದಿನವೂ ಕೆಲಸದಲ್ಲಿ ಮಗ್ನರಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಮಂಟಪದಲ್ಲಿಯೇ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡುತ್ತಿದ್ದ ವರನ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ
ವೈರಲ್ ವೀಡಿಯೋದಲ್ಲಿ ಏನಿದೆ?
ವಿವಾಹದ ಆಚರಣೆಗಳು ನಡೆಯುತ್ತಿರುವಾಗಲೇ ಮಂಟಪದಲ್ಲಿ ಕುಳಿತಿದ್ದ ವರ ಲ್ಯಾಪ್ಟಾಪ್ನಲ್ಲಿ ತನ್ನ ಕಚೇರಿಯ ಕೆಲಸದಲ್ಲಿ ನಿರತರಾಗಿದ್ದರು. ತನ್ನ ಸಂಗಾತಿ ಕೆಲಸ ನಿರ್ವಹಿಸುತ್ತಿರುವ ದೃಶ್ಯ ನೋಡಿ ವಧುವಿಗೂ ನಗು ತಡೆಯಲು ಆಗಿರಲಿಲ್ಲ. ದೂರದಲ್ಲಿ ಕುಳಿತಿದ್ದ ವಧು ಕೂಡಾ ವರ ಲ್ಯಾಪ್ಟಾಪ್ ಹಿಡಿದು ಕುಳಿತಿರುವುದನ್ನು ಕಂಡು ನಗುತ್ತಿದ್ದರು. ವಧುವಿನ ಈ ಪ್ರತಿಕ್ರಿಯೆಯೇ ಸುಂದರವಾಗಿದೆ. ಈ ಖುಷಿಯಲ್ಲಿ ಎಲ್ಲರೂ ಜತೆಯಾಗಿದ್ದರು. ಸಂಬಂಧಿಕರು ಕೂಡಾ ಈ ದೃಶ್ಯ ಕಂಡು ನಸುನಕ್ಕಿದ್ದರು.
View this post on Instagram
ವರ್ಕ್ ಫ್ರಮ್ ಹೋಮ್ನ ಅನೇಕ ತಮಾಷೆಯ ವೀಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಇವುಗಳಲ್ಲಿ ಕೆಲವು ದೃಶ್ಯಗಳಂತು ಎಲ್ಲರನ್ನೂ ನಕ್ಕು ನಗಿಸುವಂತೆ ಮಾಡಿತ್ತು. ಸದ್ಯ ಅಂತಹದ್ದೇ ಮತ್ತೊಂದು ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಆದರೆ ಈ ಮದುವೆ ಎಲ್ಲಿ ನಡೆದಿದ್ದು ಎಂಬುದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.