ಲಕ್ನೋ: ಆರ್ಡರ್ ಮಾಡಿದ್ದ ವೆಜ್ ಪಿಜ್ಜಾ ಬದಲಾಗಿ ನಾನ್‍ವೆಜ್ ಪಿಜ್ಜಾ ಕಳುಹಿಸಿದ ತಪ್ಪಿಗಾಗಿ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ದೀಪಾಲಿ ತ್ಯಾಗ್ ಅನ್‍ಲೈನ್‍ನಲ್ಲಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಈ ಬದಲಿಗೆ ಅವರಿಗೆ ನಾನ್‍ವೆಜ್ ಪಿಜ್ಜಾ ಬಂದಿದೆ. ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದಾರೆ.
Advertisement
Advertisement
2019ಮಾರ್ಚ್, 21ರಂದು ನಾನು ಅಮೆರಿಕನ್ ಪಿಜ್ಜಾ ಔಟ್‍ಲೆಟ್‍ನಲ್ಲಿ ಆನ್‍ಲೈನ್ ಮೂಲಕವಾಗಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದೆ. ಬದಲಾಗಿ ನನಗೆ ನಾನ್ ವೆಜ್ ಪಿಜ್ಜಾ ಕಳುಹಿಸಿಕೊಟ್ಟಿದ್ದಾರೆ. ತುಂಬಾ ಹಸಿವಾದ್ದರಿಂದ ನಾನು ಈ ವಿಚಾರ ತಿಳಿಯದೆ ಹಾಗೇ ತಿಂದಿದ್ದೇನೆ. ಹುಟ್ಟಿದಾಗಿನಿಂದಲೂ ಶುದ್ಧ ಸಸ್ಯಹಾರಿಯಾಗಿರುವ ನನಗೆ ಹಾಗೂ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹೀಗಾಗಿ ನನಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲದ ಮೊರೆ ಹೋಗಿದ್ದೇನೆ ಎಂದಿದ್ದಾರೆ. ರೆಸ್ಟೋರೆಂಟ್‍ನವರು ನಿಲಕ್ಷ್ಯದ ವಿರುದ್ಧ ದೂರು ನೀಡಿದ್ದರೆಂದು ಗ್ರಾಹಕ ನ್ಯಾಯಾಲಯಕ್ಕೆ ತ್ಯಾಗಿ ವಕೀಲ ಫರ್ಹಾತ್ ವಾರ್ಸಿ ಸಿಳಿಸಿದ್ದಾರೆ.
Advertisement
Advertisement
ಘಟನೆಯ ಬಳಿಕ 2019ರ ಮಾರ್ಚ್ 26 ರಂದು ಪಿಜ್ಜಾ ರೆಸ್ಟರೋರೆಂಟ್‍ನ ಮ್ಯಾನೇಜರ್ ಎಂದು ಹೇಳಿಕೊಂಡು ತ್ಯಾಗಿ ಅವರಿಗೆ ಕರೆಮಾಡಿ ನಿಮ್ಮಿಂದ ಯಾವುದೇ ಹಣ ಪಡೆಯದೆ ನಿಮ್ಮ ಕುಟುಂಬಕ್ಕೆ ನಾವು ಪಿಜ್ಜಾ ನೀಡುತ್ತೇವೆ ಎಂದು ಹೇಳಿದ್ದಾರೆ. ಆಗ ತ್ಯಾಗಿ ಅವರು ಇದು ಸಾಮಾನ್ಯವಾದ ಪ್ರಕರಣವಲ್ಲ. ನಿಮ್ಮ ಕಂಪನಿ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ. ಹಲವಾರು ದುಬಾರಿ ಆಚರಣೆಗಳ ಮೂಲಕವಾಗಿ ಹೋಗಬೇಕಾಗುತ್ತದೆ. ಇದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಕಂಪನಿಗೆ ಸೂಚಿಸಿದೆ. ಮಾರ್ಚ್ 17 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.