ಮುಂಬೈ: ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ಶ್ವಾನವೊಂದಕ್ಕೆ ಬೀಳ್ಕೊಟ್ಟ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕರ್ತವ್ಯದಿಂದ ನಿವೃತ್ತಿ ಹೊಂದಿ ಶ್ವಾನವನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.
Advertisement
#WATCH Maharashtra: Spike – a sniffer dog who was a part of bomb detection & disposal squad of Nashik City Police Force, received farewell on 24th Feb after completing 11 yrs of service. Spike was paraded on bonnet of Police vehicle on the occasion
(Video Source: Nashik Police) pic.twitter.com/FY7GsJMFNg
— ANI (@ANI) February 27, 2021
Advertisement
ಸ್ಪೈಕ್ ಕೂಡ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ವೃತ್ತಿಜೀವನದ ಹಂತವನ್ನು ಮುಗಿಸಿ ನಿವೃತ್ತಿ ಜೀವನದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.
Advertisement
नाशिक पोलिसांसाठी बॉम्ब शोधण्यात तरबेज असलेला “स्निफर स्पाईक” डॉग एवढीच त्याची ओळख नव्हती! गेली ११ वर्षे तो इमानेइतबारे देशसेवा करीत होता. म्हणूनच कुटुंबातील एक सदस्य निवृत्त झाल्याच्या भावनेने पोलिसांनी त्याला असा शाही निरोप दिला. या श्वानाला माझा सलाम!@nashikpolice pic.twitter.com/7vD5kfGH8I
— ANIL DESHMUKH (@AnilDeshmukhNCP) February 25, 2021
Advertisement
ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.