Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ: ಅಶ್ವಥ್ ನಾರಾಯಣ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ: ಅಶ್ವಥ್ ನಾರಾಯಣ್

Bengaluru City

ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ: ಅಶ್ವಥ್ ನಾರಾಯಣ್

Public TV
Last updated: February 27, 2021 6:05 pm
Public TV
Share
4 Min Read
ashwath naryayn
SHARE

– ಸರ್ವ ಸ್ವಾಯತ್ತತೆ ಮೂಲಕ ಬೋರ್ಡ್ ಆಫ್ ಗವರ್ನೆನ್ಸ್ ವ್ಯವಸ್ಥೆ

ಬೆಂಗಳೂರು: ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿ) ಮಾದರಿಯಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ಆಡಳಿತ, ಶೈಕ್ಷಣಿಕ, ಆರ್ಥಿಕ ಸ್ವರೂಪವನ್ನು ಆಮಲಾಗ್ರವಾಗಿ ಬದಲಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.

ashwath 3

ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್ಸಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶತಮಾನದ ಇತಿಹಾಸವುಳ್ಳ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿ) ಅಭಿವೃದ್ಧಿಪಡಿಸುವ ಕೆಲಸವನ್ನು ಸರ್ಕಾರ ಈಗಾಗಲೇ ಕೈಗೆತ್ತಿಕೊಂಡಿದೆ. ಆರ್ಥಿಕ, ಆಡಳಿತ ಮತ್ತು ಶೈಕ್ಷಣಿಕವಾಗಿ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಜಾಗತಿಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ಕೃಷಿ ವಿವಿಯನ್ನೂ ಅದೇ ಮಾದರಿಯಲ್ಲಿ ಪರಿವರ್ತನೆ ಮಾಡಲಾಗುವುದು. ಇಲ್ಲಿ ಬೋರ್ಡ್ ಆಫ್ ಗವರ್ನೆನ್ಸ್ ವ್ಯವಸ್ಥೆಯೇ ಬರಲಿದೆ ಎಂದರು.

ಕೃಷಿ ವಿವಿಯಲ್ಲೂ ಬೋರ್ಡ್ ಆಫ್ ಗವರ್ನೆನ್ಸ್ ವ್ಯವಸ್ಥೆಯೇ ಬರಲಿದೆ. ಆಡಳಿತಾತ್ಮಕವಾಗಿ ಸಂಪೂರ್ಣ ಬದಲಾವಣೆ ಇರುತ್ತದೆ. ವಿವಿಗಳಿಗೆ ರಾಜಕೀಯ ನೇಮಕಾತಿಗಳು, ಶಿಷ್ಯಂದಿರನ್ನು ತಂದು ಕೂರಿಸುವುದು, ಸ್ವಹಿತಾಸಕ್ತಿಗಳು ಮುಂತಾದವುಗಳಿಂದ ನಾವು ಹೊರಬರಬೇಕಿದೆ. ಅತ್ಯುತ್ತಮ ಯಾರಿದ್ದಾರೋ ಅವರಷ್ಟೇ ಇಲ್ಲಿನ ಉನ್ನತ ಸ್ಥಾನಗಳಲ್ಲಿ ಇರಬೇಕು. ಇದೇ ಮಾರ್ಗಸೂಚಿಯನ್ನು ಪ್ರತೀ ಕಾಲೇಜಿಗೂ ಅನ್ವಯ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ashwath 4

ಸದ್ಯ ಒಂದು ಎಂಜಿನಿಯರಿಂಗ್ ಕಾಲೇಜ್ ನಡೆಸಲು ವರ್ಷಕ್ಕೆ 30 ಕೋಟಿ ರೂ, ವೆಚ್ಚ ಮಾಡಲಾಗುತ್ತಿದೆ. ಒಂದು ಐಐಟಿಗೆ 1,200 ಕೋಟಿ ಖರ್ಚು ಮಾಡಲಾಗುತ್ತಿದೆ. ಗುಣಮಟ್ಟದ ಬೋಧನೆ, ಕಲಿಕೆ ಜತೆಗೆ ಜಾಗತಿಕ ಮಟ್ಟದ ಸೌಲಭ್ಯಗಳು ಇರಬೇಕು ಎನ್ನುವ ಕಾರಣಕ್ಕೆ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿ ಮಾಡಿ ವಾರ್ಷಿಕ 150 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರ ಅನುದಾನ ನೀಡುವುದರ ಜೊತೆಗೆ, ದಾನಿಗಳು, ವಿದ್ಯಾರ್ಥಿಗಳ ಶುಲ್ಕ ಮತ್ತು ಹಳೆಯ ವಿದಾರ್ಥಿಗಳಿಂದ ನೆರವು ಪಡೆಯಲು ಅವಕಾಶ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಕಾಲೇಜಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸ್ವಾಯತ್ತತೆ ನೀಡಲಾಗುತ್ತಿದೆ. ಅಲ್ಲಿ ಪ್ರತ್ಯೇಕ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುತ್ತದೆ ಎಂದು ಮಾಹಿತಿ ನೀಡಿದರು.

ಲೈಸೆನ್ಸ್ ರಾಜ್ ವ್ಯವಸ್ಥೆ ನಿರ್ಮೂಲನೆ: ರಾಜ್ಯ ಕೃಷಿ ವ್ಯವಸ್ಥೆಯಲ್ಲಿ ತುಂಬಿಹೋಗಿದ್ದ ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ನಿರ್ಮೂಲನ ಮಾಡುವುದು ಹಾಗೂ ಕೃಷಿಯಲ್ಲಿ ನವೋದ್ಯಮ ಹಾಗೂ ಆವಿಷ್ಕಾರಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಅನೇಕ ಸುಧಾರಕಣೆಗಳನ್ನು ಜಾರಿಗೆ ತಂದಿದೆ ಎಂದು ಅಭಿಪ್ರಯಾಪಟ್ಟರು.

aswath

ನಮ್ಮ ದೇಶದಲ್ಲಿ ಶೇ.60ರಷ್ಟು ಜನರು ಕೃಷಿಯಲ್ಲಿ ನಿರತರಾಗಿದ್ದಾರೆ. ಇಷ್ಟು ಅಗಾಧ ಪ್ರಮಾಣದ ಜನರು ಅವಲಂಭಿಸಿರುವ ಕ್ಷೇತ್ರದ ಉದ್ಯಮ ಸ್ವರೂಪ ನೀಡದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತವೆ. ಹೀಗಾಗಿ ಅನಗತ್ಯ ರಾಜಕೀಯ ಮಾಡುವುದು ಯಾರಿಗೂ ಶೋಭೆಯಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಮಸೂದೆಗಳು ನೂರಕ್ಕೆ ನೂರರಷ್ಟು ರೈತರಿಗೆ ಅನುಕೂಲವಾಗಿವೆ. ಹಳೆಯ ಕಾಯ್ದೆಗಳ ಉತ್ತಮ ಅಂಶಗಳನ್ನು ಇಟ್ಟುಕೊಂಡು ಹೊಸ ಅಂಶಗಳನ್ನು ಸೇರಿಸಲಾಗಿದೆ. ಗುತ್ತಿಗೆ ಆಧಾರಿತ ಕೃಷಿ ಇರಬಹುದು ಅಥವಾ ಕೃಷಿ ಉತ್ಪಾದಕರಿಗೆ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸುವುದು, ಉತ್ಪಾದಕನಿಂದ ಗ್ರಾಹಕನಿಗೆ ನೇರ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಮಹತ್ವದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿಎಂ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಮೊದಲು ರೈತರು ನಡೆಸುತ್ತಿದ್ದ ಒಟ್ಟು ವಹಿವಾಟಿನ ಮೇಲೆ ಶೇ.1.5ರಷ್ಟು ಸೆಸ್ ಹಾಕಲಾಗುತ್ತಿತ್ತು. ಈಗ ಕೇವಲ 60 ಪೈಸೆಗೆ ಇಳಿಸಿದ್ದೇವೆ. ಹಾಗೆ ನೋಡಿದರೆ ಸರ್ಕಾರದ ಆದಾಯನ್ನೇ ಕಡಿಮೆ ಮಾಡಿಕೊಂಡು ರೈತರು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಸುಧಾರಣೆಗಳನ್ನು ತರಲಾಗಿದ್ದು, ಕಳೆದ ಎಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳೇ ಆಗಿರಲಿಲ್ಲ. ಎಲ್ಲವೂ ನಿಂತ ನೀರಿನಂತೆ ಆಗಿಬಿಟ್ಟಿತ್ತು. ತಾಂತ್ರಿಕವಾಗಿ ಕೃಷಿಯನ್ನು ಮೇಲೆತ್ತು ಕೆಲಸವನ್ನು ಮಾಡಿರಲಿಲ್ಲ ಎಂದು ದೂರಿದರು.

ಮುಂಚೂಣಿಯಲ್ಲಿ ಕರ್ನಾಟಕ: ಪ್ರಸ್ತುತ ಕರ್ನಾಟಕವು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ದೇಶದ ಒಟ್ಟಾರೆ ಶೇ.50ರಷ್ಟು ಕೃಷಿ ತಂತ್ರಜ್ಞಾನ ಸಂಸ್ಥೆಗಳು ನಮ್ಮ ರಾಜ್ಯದಲ್ಲೇ ಇವೆ. ಜೈವಿಕ ತಂತ್ರಜ್ಞಾನದಲ್ಲೂ ನಾವು ಮೊದಲನೇ ಸ್ಥಾನದಲ್ಲೇ ಇದ್ದೇವೆ. ಕೃಷಿಗೆ ಬಯೋ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುವ ದಿಸೆಯಲ್ಲಿ ನಾವು ಎಲ್ಲರಿಗಿಂತಲೂ ಮುಂದೆ ಇದ್ದೇವೆ. ಪ್ರಸ್ತುತ ಬಿಟಿ ಕ್ಷೇತ್ರದ ವಹಿವಾಟು 26 ಶತಕೋಟಿ ಡಾಲರ್ ಇದ್ದು, ಅದನ್ನು 50 ಶತಕೋಟಿ ಡಾಲರ್‍ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಇದರೊಂದಿಗೆ ನಾವು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಡಿಜಿಟಲ್ ಕೃಷಿಯತ್ತ ಹೊರಳುತ್ತಿದ್ದೇವೆ. ವಾತಾವರಣ, ಭೂಮಿ, ಮಳೆ ಇತ್ಯಾದಿ ಅಂಶಗಳನ್ನು ನಾವು ಸುಲಭವಾಗಿ ತಿಳಿದುಕೊಡು ಬೇಸಾಯ ಮಾಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ashwath 2

ತಂದೆಯ ಉದಾಹರಣೆ ಕೊಟ್ಟ ಡಿಸಿಎಂ: ಕೃಷಿ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಮಣ್ಣಿನ ಸಂಬಂಧವನ್ನು ಕಡಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನಾನು ಕೂಡ ಕೃಷಿ ಕುಟುಂಬದಿಂದ ಬಂದವನೇ. ನಮ್ಮ ತಂದೆಯವರೂ ಬೇಸಾಯಗಾರರೇ. ಸರ್ಕಾರಿ ಕೆಲಸ ಸಿಕ್ಕಿದರೂ ಅವರು ಮಾತ್ರ ಮತ್ತೆ ಮತ್ತೆ ಊರಿಗೆ ಹೋಗಿ ವ್ಯವಸಾಯದಲ್ಲಿ ನಿರತರಾಗುತ್ತಿದ್ದರು. ಕೊನೆಗೆ ಕಷ್ಟಪಟ್ಟು ನಮ್ಮ ಸಂಬಂಧಿಕರು ತಂದೆಯನ್ನು ಕರೆತಂದು ಸರ್ಕಾರಿ ಕೆಲಸದಲ್ಲಿ ಕೆಲ ವರ್ಷ ತೊಡಗುವಂತೆ ಮಾಡಿದರು. ಆದರೆ ನಿವೃತ್ತರಾದ ನಂತರ ಅವರು ತೆರಳಿದ್ದು ನಮ್ಮ ಹಳ್ಳಿಗೆ, ಮಾಡಿದ್ದು ಕೃಷಿಯನ್ನೇ. ಹೀಗಾಗಿ ಕೃಷಿ ಜತೆಗಿನ ಬಾಂಧವ್ಯವನ್ನು ಯಾರಿಂದಲೂ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ವಿವಿಯ ಡೀನ್ ಡಾ.ಡಿ.ಎಲ್.ಸಾವಿತ್ರಮ್ಮ, ಹಳೆಯ ವಿದಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೆ.ನಾರಾಯಣ ಗೌಡ, ಕಾರ್ಯದರ್ಶಿ ಡಾ. ಹರಿಣಿಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

TAGGED:agricultureAshwath NarayanBangalorePublic TVvishweshwaraiahಅಶ್ವತ್ಥ ನಾರಾಯಣ್ಕೃಷಿಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Drugs
Crime

38 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಎನ್‌ಸಿಬಿ

Public TV
By Public TV
31 minutes ago
big bulletin 17 april 2026 part 1
Big Bulletin

ಬಿಗ್‌ ಬುಲೆಟಿನ್‌ 17 April 2026 ಭಾಗ-1

Public TV
By Public TV
1 hour ago
big bulletin 17 april 2026 part 2
Big Bulletin

ಬಿಗ್‌ ಬುಲೆಟಿನ್‌ 17 April 2026 ಭಾಗ-2

Public TV
By Public TV
1 hour ago
big bulletin 17 april 2026 part 3
Big Bulletin

ಬಿಗ್‌ ಬುಲೆಟಿನ್‌ 17 April 2026 ಭಾಗ-3

Public TV
By Public TV
1 hour ago
Leopard 1
Districts

ಮೈಸೂರು | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮನೆ ಹೊಕ್ಕಿದ್ದ ಚಿರತೆ ಸೆರೆ

Public TV
By Public TV
1 hour ago
Mandya Youth Death
Districts

ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?