ವಿಶ್ವನಾಥ್ ಒರಿಜಿನಲ್ ಬಿಜೆಪಿ ಅಲ್ಲ – ರೇಣುಕಾಚಾರ್ಯ

Public TV
2 Min Read
RENUKACHARYA 3

– ಬಿಎಸ್‍ವೈಗೆ ವಯಸ್ಸಾಗಿದ್ದರೂ ಮನಸ್ಸು ಯುವಕನಂತೆ
– ನಿಮ್ಮ ವಯಸ್ಸು ಎಷ್ಟು?

ಬೆಂಗಳೂರು: ವಿಶ್ವನಾಥ್ ಅವರು ಹತಾಶ ಮನೋಭಾವದಿಂದ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ಪಾದಯಾತ್ರೆ ಮಾಡಿ ಪಕ್ಷಕಟ್ಟಿದವರು. ಅವರ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ನಿಮಗಿಲ್ಲ. ನೀವು ಒರಿಜಿನಲ್ ಬಿಜೆಪಿ ಅಲ್ಲ ಎಂದು ಹೆಚ್ ವಿಶ್ವನಾಥ್ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

VISHWANATH 1 medium

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ನಮಗೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ವಿಶ್ವಾಸ ಇದೆ. 2018ರಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಈ ಸರ್ಕಾರ ಬಂದಿದೆ. ಇವರ ವಿರುದ್ಧ ದೆಹಲಿಯಲ್ಲಿ ಹೋಗಿ ಲಾಬಿ ಮಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಅರೆ ಹುಚ್ಚ, ತಿಕ್ಕಲು ಬುದ್ಧಿ – ಎಸ್.ಆರ್.ವಿಶ್ವನಾಥ್

B S Yediyurappa medium

ದೆಹಲಿಗೆ ಹೋಗಿ ಲಾಬಿ ಮಾಡಿದವರಿಗೆ ಒಂದು ಶಾಸಕರನ್ನು ಗೆಲ್ಲಿಸುವ ಯೋಗ್ಯತೆ ಇಲ್ಲ. ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎನ್ನುತ್ತಾರೆ. ಹಾಗಾದರೆ ನಿಮ್ಮ ವಯಸ್ಸು ಎಷ್ಟು? ನಿಜ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದರೂ ಅವರ ಮನಸ್ಸು ಯುವಕನಂತೆ ಕೆಲಸ ಮಾಡುತ್ತಿದೆ ಎಂದು ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

yathnal

ನೀವು ಕಾಂಗ್ರೆಸ್‍ನಲ್ಲಿದ್ದಾಗ ಸಿದ್ದರಾಮಯ್ಯನವರಿಗೆ ಮೋಸ ಮಾಡಿದ್ರಿ, ಬಳಿಕ ಜೆಡಿಎಸ್‍ಗೆ ಬಂದು ಅಲ್ಲಿ ನಿಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರು ಅವರಿಗೆ ಮೋಸ ಮಾಡಿದ್ರಿ. ಇದೀಗ ಹತಾಶೆಯಿಂದ ಸಿಎಂ ವಿರುದ್ಧ ಮಾತಾಡಬೇಡಿ. ನೀವು ಮೂಲ ಬಿಜೆಪಿನಾ? ಶಾಸಕರು ನಾವು, ಸಿಎಂ ಅವರನ್ನು ಆಯ್ಕೆ ಮಾಡುವುದು ಪರಿಷತ್ ಸದಸ್ಯರಲ್ಲ. ಪಂಚಮಸಾಲಿ ಆಗಬೇಕು ಅವರಾಗಬೇಕು ಇವರಾಗಬೇಕು ನಿರ್ಧಾರ ಮಾಡೋದು ಹೈಕಮಾಂಡ್ ನೀವು ಇಂತಹ ಹೇಳಿಕೆ ನಿಲ್ಲಿಸಬೇಕು ಎಂದು ಕಿಡಿಕಾರಿದರು.

ರಾಜೀನಾಮೆ ಕೊಟ್ಟು ಬಂದ ಶಾಸಕರು ನಮ್ಮ ಪರವಾಗಿದ್ದಾರೆ. ಯತ್ನಾಳ್ ಹಾಗೂ ವಿಶ್ವನಾಥ್ ಅವರ ಇಬ್ಬರ ಭಾವನೆ ಒಂದೇ. ಅಧಿವೇಶನ ನಡೆಯುವಾಗ ನಾನು ಸಿಎಂ ಆದರೆ ನಿಮ್ಮನ್ನು ಗೃಹಮಂತ್ರಿ ಮಾಡ್ತೀನಿ ಅಂತ ಯತ್ನಾಳ್ ನನಗೆ ಹೇಳಿದ್ದರು. ಯತ್ನಾಳ್ ತಿರುಕನ ಕನಸು ಕಾಣಬೇಡಿ ಎಂದು ಮಾತಿನ ಏಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *