ರಾಯಚೂರು: ಎಚ್. ವಿಶ್ವನಾಥ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ಇತ್ತೀಚೆಗೆ ನಮ್ಮ ಪಾರ್ಟಿಗೆ ಸೇರಿದ್ದಾರೆ. ಅವರನ್ನು ಕರೆದು ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ತಿಳಿ ಹೇಳುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಯಚೂರಿನಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಹಾಗೂ ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ್ದ ಕಟೀಲ್, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಊಹಾಪೋಹಗಳ ಮೂಲಕ ನಾನು ಉತ್ತರ ಕೊಡೋಕೆ ಆಗಲ್ಲ. ಎಲ್ಲರ ಹತ್ತಿರ ನಾನೂ ಮಾತನಾಡಿದ್ದೇನೆ, ಅರುಣ್ ಸಿಂಗ್ ಮಾತನಾಡಿದ್ದಾರೆ ಎಂದರು.
Advertisement
Advertisement
ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ವಿಚಾರ ತನಿಖಾ ಹಂತದಲ್ಲಿದೆ ಸರ್ಕಾರ ಅದನ್ನ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದು ಸರಿಯಲ್ಲ. ಪ್ರತಿ ಜನಪ್ರತಿನಿಧಿಗೂ ಸ್ವಾತಂತ್ರ್ಯವಿದೆ. ಅವರು ಯಾವ ಮಸೀದಿ, ದೇವಸ್ಥಾನ, ಮಠಕ್ಕೂ ಹೋಗಬಹುದು ಅಂತ ಹೇಳಿದರು. ಫಡ್ನವಿಸ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಕಟಿಲ್, ಅವರು ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಫಡ್ನವಿಸ್-ರಮೇಶ್ ಜಾರಕಿಹೊಳಿಯದ್ದು ಸಾಮಾನ್ಯ ಭೇಟಿ ಅದಕ್ಕೆ ಬೇರೆ ಅರ್ಥಗಳನ್ನ ಕಲ್ಪಿಸುವ ಅಗತ್ಯವಿಲ್ಲ ಎಂದರು. ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ
Advertisement
Advertisement
ಇವತ್ತು ಪ್ರಶ್ನೆ ಮಾಡಬೇಕಾಗಿರುವುದು ಸೋತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಜಗಳ ಪ್ರಾರಂಭ ಮಾಡಿದ್ದಾರೆ. ಪಕ್ಷದಲ್ಲಿ ಖುರ್ಚಿ ಹೋರಾಟ ಪ್ರಾರಂಭವಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ಜೈಲಿನಲ್ಲಿದ್ದವನನ್ನೇ ಸಸ್ಪೆಂಡ್ ಮಾಡಲು ಆಗಲಿಲ್ಲ. ಪಕ್ಷದ ಪದಾಧಿಕಾರಿಗಳನ್ನ ಆಯ್ಕೆ ಮಾಡಲು ಹೈಕಮಾಂಡಗೆ ಹೋಗಿ ಗಲಾಟೆ ಮಾಡಿ ಹೈಕಮಾಂಡ್ ಅದನ್ನ ನಿಲ್ಲಿಸುವಂತ ಕೆಲಸಗಳಾಗಿವೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ಪ್ರಶ್ನೆಗಳಿವೆ. ಗುಂಪುಗಾರಿಕೆ ಇರುವಂತಹದ್ದು ಕಾಂಗ್ರೆಸ್‍ನಲ್ಲಿ, ಒಡಂಬಡಿಕೆಯಿಲ್ಲದಿರುವುದು ಕಾಂಗ್ರೆಸ್‍ನಲ್ಲಿ. ಮುಂದಿನ ಸರ್ಕಾರ ನಮ್ಮದೇ ಬರುತ್ತೆ ಆದ್ರೆ ಕಾಂಗ್ರೆಸ್ ನವರು ಈಗಲೇ ಗಲಾಟೆ ಶುರು ಮಾಡಿಕೊಂಡಿದ್ದಾರೆ. ಮೂಲ ವಲಸಿಗ ತಿಕ್ಕಾಟ ಕಾಂಗ್ರೆಸ್‍ನಲ್ಲಿ ಶುರುವಾಗಿದೆ ಅಂತ ಹೇಳಿದರು.
ಮಸ್ಕಿ ಉಪಚುನಾವಣೆ ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಕೆಲವಡೆ ಹಿನ್ನೆಡೆಯಾಗಿರುವ ಬಗ್ಗೆಯೂ ಅವಲೋಕನ ನಡೆಸಿದೆ. ಪಕ್ಷದ ಕಾರ್ಯಕರ್ತರ ಸಭೆ ಮೂಲಕ ಚರ್ಚೆ ಮಾಡುತ್ತಿದ್ದೇವೆ ಅಂತ ನಳಿನ್ ಕುಮಾರ್ ಕಟೀಲ್ ಹೇಳಿದರು.