ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಸಿದ್ಧತೆಗಳ ಪರಿಶೀಲನೆ ನಡೆಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣಿಸಿದ್ದಾರೆ. ಸೆ.19 ರಿಂದ ಸಂಪೂರ್ಣ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಡೆಯುವ ಟೂರ್ನಿಯನ್ನು ಸಿದ್ಧತೆಗಳನ್ನು ಸ್ವತಃ ಗಂಗೂಲಿ ಪರಿಶೀಲಿಸಲಿದ್ದಾರೆ.
ವಿಶೇಷ ವಿಮಾನದಲ್ಲಿ ಇಂದು ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದ್ದು, ಈ ವಿಚಾರವನ್ನು ತಮ್ಮ ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಹಿತಿ ಹಂಚಿಕೊಂಡಿದ್ದಾರೆ. ಐಪಿಎಲ್ 2020ರ ಟೂರ್ನಿಗಾಗಿ ದುಬೈ ತೆರಳುತ್ತಿದ್ದೇನೆ. ಆರು ತಿಂಗಳ ಅವಧಿಯಲ್ಲಿ ಇದು ನನ್ನ ಮೊದಲ ವಿಮಾನ ಪ್ರಯಾಣ. ಜೀವನದಲ್ಲಿ ಬಂದ ಬದಲಾವಣೆಗಳು ಕ್ರೇಜಿಯಾಗಿದೆ ಎಂದಿದ್ದಾರೆ.
Advertisement
Advertisement
2020ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗುತ್ತಿವೆ. ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಐಪಿಎಲ್ ಟೂರ್ನಿಯ ಪಂದ್ಯಗಳು ನಡೆಯಲಿದೆ. ಈ ಬಾರಿಯ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಸಾಕಷ್ಟು ಶ್ರಮ ವಹಿಸಿದೆ. ಟಿ20 ವಿಶ್ವಕಪ್, ಏಷ್ಯಾ ಕಪ್ ಎರಡು ಟೂರ್ನಿಗಳು ಮುಂದೂಡಿದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲಾಗುತ್ತಿದೆ.
Advertisement
ಆ.20ರ ವೇಳೆಗೆ ಟೂರ್ನಿಯ ಎಲ್ಲಾ ಫ್ರಾಂಚೈಸಿಗಳು ದುಬೈ, ಅಬುಧಾಬಿ ಆಗಮಿಸಿದ್ದವು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಮಂದಿಗೆ ಕೊರೊನಾ ವೈರಸ್ ದೃಢವಾಗಿತ್ತು. ಇದರ ಬೆನ್ನಲ್ಲೇ ಅನುಭವಿ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಕೂಡ ಟೂರ್ನಿಯಿಂದ ಹೊರ ನಡೆದಿದ್ದರು. ಇತ್ತ ಬಿಸಿಸಿಐ ಕೂಡ ಟೂರ್ನಿಯ ಶೆಡ್ಯೂಲ್ ಪ್ರಕಟಿಸಲು ಬಿಸಿಸಿಐ ಹೆಚ್ಚಿನ ಸಮಯ ತೆಗೆದುಕೊಂಡಿತ್ತು.
Advertisement
IPL Diaries: Episode 2⃣
Fun social media campaigns, beach volleyball and hustle in the nets – how are the 8⃣ franchises gearing up for #Dream11IPL? ????????
Let’s find out ???? https://t.co/0d4En3ehE0 pic.twitter.com/1m21ItYaf8
— IndianPremierLeague (@IPL) September 8, 2020
ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ ಭಾನುವಾರ ಐಪಿಎಲ್ 2020ರ ಶೆಡ್ಯೂಲ್ ಬಿಡುಗಡೆ ಮಾಡಲಾಗಿತ್ತು. ಬಿಸಿಸಿಐ ಅಧ್ಯಕ್ಷ ಗಂಗೂಲಿ ಟೂರ್ನಿಯ ಸಿದ್ಧತೆ ಪರಿಶೀಲನೆಗೆ ಮುಂದಾಗಿದ್ದಾರೆ. ಈಗಾಗಲೇ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೇರಿದಂತೆ ಕೆಲ ಅಧಿಕಾರಗಳು ದುಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.
???? #Dream11IPL 2020 Schedule Announced.
For fixtures and more details, click here ???? https://t.co/0mj5LBXeah pic.twitter.com/dNPvxMZFVu
— IndianPremierLeague (@IPL) September 6, 2020