ಡಿಸ್ಪುರ್: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ತಡೆದು ಪುಂಡನೊಬ್ಬ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಚಲಿತರಾಗದೇ ಆತನ ಸ್ಕೂಟರ್ ಎಳೆದು ಚರಂಡಿಗೆ ತಳ್ಳಿ ಆತ ಎಲ್ಲೂ ತಪ್ಪಿಸಿಕೊಳ್ಳದಂತೆ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾವನಾ ಕಶ್ಯಪ್ ಎಂಬವರು ಈ ವೀಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಡ್ರಸ್ ತಿಳಿದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಪದೇ ಪದೇ ಆರೋಪಿ ಪೀಡಿಸುತ್ತಿದ್ದ, ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ, ಈ ವೇಳೆ ನಾನು ಒಂದು ಕ್ಷಣ ಏನಾಯಿತು ಎಂಬುದರ ಪ್ರಜ್ಞೆಯನ್ನು ಕಳೆದುಕೊಂಡೆ. ಆದರೆ ಯಾವಾಗ ನನ್ನ ಬಾಯಿಯಿಂದ ಮಾತುಗಳು ಬರಲಾರಂಭಿಸತೋ ಆಗ ಆತ ಭಯಭೀತಗೊಂಡ ಎಂದು ಭಾವನಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
ಮಹಿಳೆ ಸ್ಕೂಟರ್‍ನನ್ನು ಚರಂಡಿಗೆ ತಳ್ಳಿದ ನಂತರ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಆರೋಪಿ ತನ್ನ ಸ್ಕೂಟರ್‍ನನ್ನು ಹಿಂದೆಗೆದುಕೊಳ್ಳಲು ಸ್ಥಳೀಯರಲ್ಲಿ ಸಹಾಯ ಕೇಳುತ್ತಿರುವುದನ್ನು ಕಾಣಬಹುದಾಗಿದೆ.
ಘಟನೆ ವೇಳೆ ಆರೋಪಿ ವೇಗವಾಗಿ ಸ್ಕೂಟರನ್ನು ಚಲಾಯಿಸಲು ಪ್ರಯತ್ನಿಸಿದಾಗಲೂ ಮಹಿಳೆ ಅದನ್ನು ಹಿಡಿದು ಚರಂಡಿಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಗಲಾಟೆ ಮಾಡುತ್ತಿದ್ದ ವೇಳೆ ಸ್ಥಳೀಯರು ಸೇರುತ್ತಿದ್ದಂತೆ, ಮಹಿಳೆ ಮಧುಶನ ರಾಜ್ ಕುಮಾರ್ ಎಂಬ ವ್ಯಕ್ತಿಗೆ ನಡೆದ ಎಲ್ಲಾ ವಿಚಾರವನ್ನು ವಿವರಿಸಿದ್ದಾರೆ. ಆತನಿಂದ ಮಹಿಳೆ ಹೊರ ಹೋಗಲು ಹೆದರಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್