ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರೀತಿಯ ಪುತ್ರಿ ವಮಿಕಾ ಜನನವಾಗಿ 6 ತಿಂಗಳಾಗಿದ್ದು, ಕ್ಯೂಟ್ ಫೋಟೋಗಳ ಮೂಲಕ ಅನುಷ್ಕಾ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ.
ಮಗು ಜನನವಾಗಿ ಜುಲೈ 11ಕ್ಕೆ ಮಗು 6 ತಿಂಗಳಾಗಿದ್ದು, ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ
- Advertisement 2
View this post on Instagram
- Advertisement 3
ಇತ್ತೀಚೆಗಷ್ಟೇ ಮಗುವನ್ನು ಎತ್ತಿಕೊಂಡು ಯುಕೆಯ ರಸ್ತೆಯಲ್ಲಿ ನಿಂತಿದ್ದ ಫೋಟೋವನ್ನು ಹಂಚಿಕೊಂಡಿದ್ದ ಅನುಷ್ಕಾ, ಇದೀಗ ಮಗುವಿಗೆ 6 ತಿಂಗಳು ತುಂಬಿರುವ ಸಂತಸದ ಸುದ್ದಿಯನ್ನು ಹೊರ ಹಾಕಿದ್ದಾರೆ. ಕೇಕ್ನ ಅರ್ಧ ಫೋಟೋ ಹಾಗೂ ವಮಿಕಾ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ತಾವು ಕಳೆದ ಸಂತಸದ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
- Advertisement 4
ಅವಳ ಒಂದು ನಗು ನಮ್ಮ ಸುತ್ತಲಿನ ಜಗತ್ತಿನ್ನೇ ಬದಲಿಸಿತು. ಇವಳು ನಮ್ಮತ್ತ ನೋಡಿದಾಗಲೆಲ್ಲ, ನಾವಿಬ್ಬರೂ ಇನ್ನೂ ಹೆಚ್ಚಿನ ಪ್ರೀತಿಯಿಂದ ಜೀವಿಸಬಹುದು. ನಮ್ಮ ಮೂವರಿಗೂ ಹ್ಯಾಪಿ 6 ಮಂಥ್ಸ್ ಎಂದು ಬರೆದುಕೊಂಡಿದ್ದಾರೆ.
ಇದೇ ವರ್ಷ ಜನವರಿ 11ರಂದು ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮಗಳಿಗೆ ವಿರುಷ್ಕಾ ದಂಪತಿ ವಮಿಕಾ ಎಂದು ಹೆಸರಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಅನುಷ್ಕಾ ಮಗುವಿನೊಂದಿಗಿನ ಫೋಟೋಗಳನ್ನು ಆಗಾಗ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಯುಕೆಯ ರಸ್ತೆಯಲ್ಲಿ ಮಗುವನ್ನು ಎತ್ತಿಕೊಂಡಿದ್ದ ಚಿತ್ರವನ್ನು ಸಹ ಹಂಚಿಕೊಂಡಿದ್ದರು.