ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದ 300 ಮಂದಿಯನ್ನು ಬಿಡುಗಡೆ ಮಾಡಲಾಯಿತು.
- Advertisement 2-
ಇದಕ್ಕೂ ಮುನ್ನ ವೈದ್ಯರಾದ ಡಾ.ಅನಿಷ್, ಡಾ.ಪ್ರಶಾಂತ, ಡಾ.ಹಳ್ಳಿ ಕರಿಬಸಪ್ಪ, ಡಾ.ಲಿಂಗರಾಜ, ಡಾ.ಗೀತಾ ನೇತೃತ್ವದ ವೈದ್ಯರ ತಂಡ ಕೇಕ್ ಕತ್ತರಿಸುವ ಮೂಲಕ ಗುಣಮುಖರಾದವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
- Advertisement 3-
- Advertisement 4-
ಕೇಕ್ ಮೇಲೆ ಕೋವಿಡ್ ರಿಕವರಿ ಎಂದು ಬರೆದಿದ್ದು ವಿಶೇಷ ಗಮನ ಸೆಳೆಯಿತು. ಬಳಿಕ ಮಾತನಾಡಿದ ಡಾ.ಅನಿಷ್, ಸೋಂಕಿನಿಂದ ಗುಣಮುರಾದವರ ಯೋಗಕ್ಷೇಮ ವಿಚಾರಿಸುವ ಮೂಲಕ ಆತ್ಮೀಯವಾಗಿ ಬೀಳ್ಕೊಡಲಾಯಿತು. ಉಳಿದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಮತ್ತೊಬ್ಬರಿಗೆ ಸ್ಫೂರ್ತಿ ಆಗಲೆಂದು ಈ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ ಎಂದರು.