ವಾಷಿಂಗ್ಟನ್: ಅಟ್ಲಾಂಟಾಕ್ಕೆ ತೆರಳಲು ಏರ್ ಫೋರ್ಸ್ ಒನ್ ವಿಮಾನ ಏರುವ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲಿನಲ್ಲಿ ಮೂರು ಬಾರಿ ಎಡವಿದ ಘಟನೆ ಶುಕ್ರವಾರ ನಡೆದಿದೆ.
ವಿಮಾನದ ಮೆಟ್ಟಿಲೇರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮುಗ್ಗರಿಸಿರುವ ವೀಡಿಯೋ ಇದೀಗ ವೈರಲ್ ಆಗಿದೆ. ತೀವ್ರವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಆಯ ತಪ್ಪಿದ ಜೋ ಬೈಡನ್, ಆಸರೆಗಾಗಿ ಮೆಟ್ಟಿಲಿನ ಬದಿಯ ಕಂಬಿಗಳನ್ನು ಹಿಡಿದುಕೊಂಡಿದ್ದಾರೆ.
Advertisement
Another angle pic.twitter.com/BQkfn9eRcQ
— Daily Caller (@DailyCaller) March 19, 2021
Advertisement
ವೀಡಿಯೋದಲ್ಲಿ ಏನಿದೆ?
ಮೊದಲ ಬಾರಿ ಎಡವಿದಾಗ ಹೇಗೋ ಮೇಲೆ ಎದ್ದು ಮುಂದೆ ಹೋಗಿದ್ದಾರೆ. ಮತ್ತೊಂದು ಹೆಜ್ಜೆ ಇರಿಸಿದಾಗ ಎರಡು ಬಾರಿ ಸತತವಾಗಿ ಮುಗ್ಗರಿಸಿದ್ದಾರೆ. ಅದೃಷ್ಟವಶಾತ್ ಮೆಟ್ಟಿಲಿನಿಂದ ಜಾರಿ ಅವಘಡ ಸಂಭವಿಸಿಲ್ಲ. ಮೂರನೇ ಬಾರಿ ಮುಗ್ಗರಿಸಿದಾಗ ಮೆಟ್ಟಿಲಿನ ಮೇಲೆ ಬೀಳುವಂತಾಗಿತ್ತು. ಬಳಿಕ ಎರಡೂ ಕಡೆಯ ಕಂಬಿಗಳನ್ನು ಹಿಡಿದು ಮೇಲೆ ಎದ್ದು ಮುಂದೆ ಹೋಗಿದ್ದಾರೆ.
Advertisement
WATCH: Biden falls three times trying to climb the stairs to board Air Force One pic.twitter.com/IfDUjLPQB4
— Breaking911 (@Breaking911) March 19, 2021
Advertisement
ಗಾಳಿ ಜೋರಾಗಿ ಬೀಸುತ್ತಿತ್ತು. ನಾನೂ ಕೂಡ ಮೆಟ್ಟಿಲು ಏರುವಾಗ ಹೆಚ್ಚೂ ಕಡಿಮೆ ಬಿದ್ದೇಬಿಟ್ಟಿದ್ದೆ. ಬೈಡನ್ ಅವರು ಶೇ.100ರಷ್ಟು ಆರಾಮಾಗಿ ಇದ್ದಾರೆ. ಯಾವ ಸಮಸ್ಯೆಯೂ ಆಗಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್ ಪೀರ್ರೆ ತಿಳಿಸಿದ್ದಾರೆ.
President Biden stumbles while walking up the stairs to Air Force One
pic.twitter.com/t959EPMHpu
— Daily Caller (@DailyCaller) March 19, 2021
ಪಾರ್ಲರ್‍ವೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಕುರಿತಾಗಿ ಏಷ್ಯನ್-ಅಮೆರಿಕನ್ ಸಮುದಾಯವನ್ನು ಮುಂಡರನ್ನು ಭೇಟಿ ಮಾಡಿ ಚರ್ಚಿಸಲು ಬೈಡನ್ ಹೊರಟಿದ್ದರು. ಅಂಟ್ಲಾಟಿಕಾಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋ ಬೈಡನ್ ಆರೋಗ್ಯವಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.