ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ನಗರಗುಂಡ ಬಳಿ ಮಧ್ಯರಾತ್ರಿ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
Advertisement
ಕೃಷ್ಣಾ ನದಿಯಿಂದ ದೇವದುರ್ಗಕ್ಕೆ ಅಕ್ರಮ ಮರಳು ಸಾಗಿಸುತ್ತಿದ್ದ ವೇಳೆ ಬೆಂಕಿ ಅವಘಡ ನಡೆದಿದೆ. ರಸ್ತೆ ಬದಿಯ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ
Advertisement
Advertisement
ರಾತ್ರಿವೇಳೆ ಮರಳುಗಾರಿಕೆ ನಿಷೇಧ ಇದ್ದರೂ ಅಕ್ರಮ ದಂಧೆ ಮಾತ್ರ ನಿರಂತರವಾಗಿ ಸಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆದಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ದೇವದುರ್ಗ ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ದಂಧೆ ನಡೆದಿದ್ದರೂ ಯಾವುದೇ ಕ್ರಮಗಳು ಜರುಗುತ್ತಿಲ್ಲ.
Advertisement
ರಾತ್ರಿ ವೇಳೆ ಕೃಷ್ಣಾ ನದಿಯಿಂದ ಮರಳು ಸಾಗಣೆ ಮಾಡುತ್ತಿರುವುದಲ್ಲದೆ, ಅತೀ ವೇಗವಾಗಿ ಟಿಪ್ಪರ್ ಚಾಲನೆ ಮಾಡಿಕೊಂಡು ಬಂದ ಹಿನ್ನೆಲೆ ರಸ್ತೆ ಬದಿಯ ವಿದ್ಯುತ್ ತಂತಿ ಟಿಪ್ಪರ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.