ಬೆಂಗಳೂರು: ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣದ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ಅಂತರವನ್ನು 12 ರಿಂದ 16 ವಾರಗಳಗೆ (84 ದಿನಗಳು) ಪರಿಷ್ಕರಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ನಿರ್ದೇಶನದಂತೆ ಈ ಕೆಳಕಂಡ ಗುಂಪುಗಳಗೆ 28 ದಿನಗಳನ್ನು ಪೂರೈಸಿದ ನಂತರ ನೀಡುವುದಾಗಿ ತಿಳಿಸಲಾಗಿದೆ.
ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ನೌಕರಿಗಾಗಿ ವಿದೇಶಕ್ಕೆ ತೆರಳುವವರು, ಅಂತರಾಷ್ಟ್ರೀಯ ಮಟ್ಟದ ಒಲಂಪಿಕ್ಸ್‌ಗಾಗಿ ಟೋಕಿಯೋಗೆ ತೆರಳುವ ಆಟಗಾರರು, ಸದರಿ ಗುಂಪಿನ ಲಸಿಕಾಕರಣಕ್ಕಾಗಿ ಭಾರತ ಸರ್ಕಾರದ ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳು (SOP) ನ್ನು ಲಗತ್ತಿಸಿದೆ. ಈ ಕಾರ್ಯಚರಣೆಗಾಗಿ ರಾಜ್ಯವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ಆಯುಕ್ತರನ್ನು ಸಮರ್ಥ ಅಧಿಕಾರಿಗಳೆಂದು (Competent Authority) ಗುರುತಿಸಿದೆ ಎಂದು ಆರೋಗ್ಯ ಅಭಿಯಾನ ನಿರ್ದೇಶಕರು ತಿಳಿಸಿದ್ದಾರೆ.
Advertisement
Advertisement
1. ಸಮರ್ಥ ಅಧಿಕಾರಿಗಳು (Competent Authority) ಸದರಿ ಅರ್ಹ ಫಲಾನುಭವಿಗಳ ಕೋವಿಶೀಲ್ ಲಸಿಕೆಯ ಎರಡನೇ ಡೋಸ್ ನ ಲಸಿಕಾಕರಣಕ್ಕಾಗಿ ಅನುಮತಿ ನೀಡಬಹುದಾಗಿದೆ.
2. ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳುವುದು.
Advertisement
3. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಯಾವುದಾದರೂ ಆಯ್ದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಈ ಗುಂಪಿನ ಫಲಾನುಭವಿಗಳ ಲಸಿಕಾಕರಣವನ್ನು ಆಯೋಜಿಸುವುದು.
4. ಸಮರ್ಥ ಅಧಿಕಾರಿಗಳು (Competent Authority) ಅರ್ಹ ಫಲಾನುಭವಿಗಳು ಒದಗಿಸುವ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ 84 ದಿನಗಳಿಗೆ ಮೊದಲು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನ ಲಸಿಕಾಕರಣಕ್ಕಾಗಿ ಅನುಮತಿ ನೀಡುವುದು.
Advertisement
5. ರಾಜ್ಯವು ನೀಡಿರುವ ಮಾದರಿ ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ (Self declaration certificate) (ಅನುಬಂಧ-4 ಅನ್ನು ಲಗತ್ತಿಸಿದೆ) ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರವನ್ನು ನೀಡುವುದು. ಈ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್ ನಲ್ಲಿ SOP ಯಂತೆ ಅಪ್‌ಲೋಡ್ ಮಾಡಿ ಲಸಿಕಾಕರಣ ನಡೆಸುವುದು.
6. ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್ ನಂಬರ್ ಅನ್ನು ಬಳಸದೇ ಲಸಿಕೆ ಪಡೆದಿದ್ದರೆ ಅಂತಹ ಫಲಾನುಭವಿಗಳಗೆ ಕೋವಿಶೀಲ್ಡ್ ನ ಎರಡನೇ ಡೋಸ್ ಲಸಿಕಾಕರಣಕ್ಕಾಗಿ ಅನುಬಂಧ-5 ರಲ್ಲಿ ಲಗತ್ತಿಸಿದ ಲಸಿಕಾ ಪ್ರಮಾಣ ಪತ್ರವನ್ನು ನೀಡುವುದು.
7. ಸಾರ್ವಜನಿಕರ ಮಾಹಿತಿಗಾಗಿ ಸದರಿ ಲಸಿಕಾ ಕೇಂದ್ರದ ಮಾಹಿತಿಯನ್ನು ಜಿಲ್ಲೆಯಲ್ಲಿ ಪ್ರಚುರಪಡಿಸುವುದು. ಇದನ್ನೂ ಓದಿ: ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ
ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣ ಕುರಿತು.@CMofKarnataka @siddaramaiah @KPCCPresident @hd_kumaraswamy @drashwathcn @GovindKarjol @laxmansavadi @mla_sudhakar @BSBommai @RAshokaBJP @VSOMANNA_BJP @nimmasuresh @ArvindLBJP @BABasavaraja @BBMPCOMM pic.twitter.com/wtCs1mf1rv
— K'taka Health Dept (@DHFWKA) June 15, 2021