ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ.
ಸುದ್ದಿಸಂಸ್ಥೆಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರು ಸಣ್ಣ ವೈಯಕ್ತಿಕ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ಸುರ್ಜೇವಾಲಾ ತಿಳಿಸಿಲ್ಲ.
Rahul Gandhi is currently on a short personal trip: Congress leader Randeep Surjewala (in file pic) to ANI pic.twitter.com/jjtHJblu8m
— ANI (@ANI) December 27, 2020
ಆದರೆ ಮಾಧ್ಯಮವೊಂದು ರಾಹುಲ್ ಗಾಂಧಿ ಇಟಲಿಗೆ ಹೋಗಿದ್ದಾರೆ ಎಂದು ವರದಿ ಮಾಡಿದೆ. ಇಂದು ಬೆಳಗ್ಗೆ ಕತಾರ್ ಏರ್ವೇಸ್ ವಿಮಾನದಲ್ಲಿ ರಾಹುಲ್ ಗಾಂಧಿ ಮಿಲಾನ್ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಲೂಗೆಡ್ಡೆ, ಮಧ್ಯವರ್ತಿ, ಫ್ಯಾಕ್ಟರಿ ಬಗ್ಗೆ ಭಾಷಣ – ರಾಹುಲ್ ದ್ವಿಮುಖ ನೀತಿ ಪ್ರಶ್ನಿಸಿದ ನಡ್ಡಾ
ರಾಹುಲ್ ಗಾಂಧಿ ಅವರ ಅಜ್ಜಿ ಇಟಲಿಯಲ್ಲಿದ್ದು ಅವರನ್ನು ನೋಡಲು ತೆರಳಿದ್ದಾರೆ ಎಂದು ವರದಿಯಾಗಿದೆ.