ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಡೆಡ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕ್ಯಾಮೆರಾದಲ್ಲಿ ಚಿರತೆ ಓಡಾಟ ಸೆರೆ ಆಗಿದೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿರಬೂರು ಗ್ರಾಮದ ನದಿ ತೀರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯ ಓಡಾಟದ ದೃಶ್ಯ ಕಂಡು ದೇವರ ಗೆಣ್ಣೂರು, ಶಿರಬೂರು, ಬಬಲಾದಿ, ಗುಣದಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಗುಣದಾಳ ಗ್ರಾಮ ಸೇರಿದಂತೆ ಕೆಲವೆಡೆ ಒಂದು ಚಿರತೆ ಪತ್ಯಕ್ಷವಾಗಿ ಜಾನುವಾರಗಳನ್ನು ಬೇಟೆಯಾಡಿತ್ತು. ತದನಂತರ ಆ ಚಿರತೆಯನ್ನ ಸೆರೆ ಹಿಡಿದಿದ್ದ ಅರಣ್ಯಾಧಿಕಾರಿಗಳು ಕಾಡಿಗೆ ಬಿಟ್ಟಿದ್ದರು.
ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.