ನವದೆಹಲಿ: 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ, ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಈ ವಿಗ್ರಹಗಳು ತಮಿಳುನಾಡಿನ ದೇವಸ್ಥಾನದಲ್ಲಿ ಕಳವು ಮಾಡಿ ಬ್ರಿಟನ್‍ಗೆ ರವಾನಿಸಲಾಗಿತ್ತು ಎನ್ನಲಾಗಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಯುನೈಟೆಡ್ ಕಿಂಗ್‍ಡಮ್ ಅಧಿಕಾರಿಗಳು ವಿಗ್ರಹಗಳನ್ನು ಹಿಂದಿರುಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
विजयनगरम काल १५००ई के पहले की ये कांस्य प्रतिमायें वापिस लाने मे तमिलनाडु सरकार,भारतीय दूतावास तथा @ASIGoI का प्रयास रहा है मै सभी का आभार व्यक्त करता हूँ @PMOIndia @JPNadda @incredibleindia @tourismgoi @MinOfCultureGoI @BJP4India @BJP4MP @BJP4TamilNadu https://t.co/lISQfVGhhC
— Prahlad Singh Patel (@prahladspatel) September 15, 2020
ಈ ವಿಗ್ರಹಗಳು ಭಾರತಕ್ಕೆ ಸೇರಿದ್ದು, 1978ರಲ್ಲಿ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾಗಿತ್ತು. ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದಿಂದ ಬಂದಿದೆ. ಇತ್ತೀಚಿಗೆ ಯುಕೆ ಅಧಿಕಾರಿಗಳು ಇದೇ ರೀತಿಯ ಎರಡು ವಿಗ್ರಹಗಳು ಮತ್ತು ಒಂದು ಸ್ತಂಭವನ್ನು ಹಸ್ತಾಂತರಿಸಿದ್ದರು ಎಂದು ಪಟೇಲ್ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಗ್ರಹಗಳನ್ನು ಹಿಂದಿರುಗಿಸಿದ ಯುಕೆ ಸರ್ಕಾರ ಮತ್ತು ಲಂಡನ್‍ನ ಭಾರತೀಯ ಹೈಕಮಿಷನ್‍ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಈ ನಿಟ್ಟನಲ್ಲಿ ಮೋದಿ ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿದ ಸಚಿವರು, 2014 ರಿಂದ ಈವರೆಗೂ ಇಂತಹ 40ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸರ್ಕಾರ ಸಂಗ್ರಹಿಸಿದೆ. ಸ್ವಾತಂತ್ರ್ಯ ನಂತರ 2013ರವರೆಗೂ ಕೇವಲ 13 ಪ್ರಾಚೀನ ವಸ್ತು ಮತ್ತು ಕಲಾಕೃತಿಗಳನ್ನು ಭಾರತ ಸರ್ಕಾರ ಮರಳಿ ತಂದಿತ್ತು ಎಂದು ಅವರು ವಿವರಿಸಿದರು.