ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ಒಕ್ಕರಿಸಿದ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ.
ಹೌದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿ ಶುಚಿತ್ವ ಅನ್ನೋದೇ ಇಲ್ಲ. ಸಮಯಕ್ಕೆ ಊಟ, ತಿಂಡಿ ಬರಲ್ಲ. ನೀರಂತೂ ಬರೋದೆ ಇಲ್ಲ.
ಅವರವರ ಬೆಡ್‍ಗಳ ಶುಚಿತ್ವ ಕೂಡ ರೋಗಿಗಳೇ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ನರಕಯಾತನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸೂಕ್ತ ಚಿಕಿತ್ಸೆ ಹಾಗೂ ಸೌಕರ್ಯ ನೀಡುವಂತೆ ಕೊರೊನಾ ಸೋಂಕಿತರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ರೋಗಿಗಳೇ ವಾರ್ಡ್ ಕಸ ಗುಡಿಸಬೇಕು, ವಾರ್ಡಿನಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್ ನೆಲ ಕ್ಲೀನ್ ಮಾಡಬೇಕು. ಬಾತ್‍ರೂಮ್ ಅಂತೂ ಪಾಚಿ ಕಟ್ಟಿದೆ. ಈ ಮಧ್ಯೆ ರೋಗಿಗಳು ಇರಬೇಕು. ಇದರಿಂದ ಬೇಸತ್ತ ರೋಗಿಗಳು ಈಗ ಸೂಕ್ತ ಸೌಲಭ್ಯ ಹಾಗೂ ಚಿಕಿತ್ಸೆಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಸಚಿವರೇ ಇದೆಂಥಾ ಅವಸ್ಥೆ, ಸೋಂಕಿನ ನರಳಾಟದ ಮಧ್ಯೆಯೂ ಇದೆಂಥಾ ಕೆಲಸ, ಚಿಕಿತ್ಸೆ ಕೊಡೋ ಬದಲು ಇದೇನು ಮಾಡಿಸ್ತಿದ್ದೀರಿ. ಹೀಗೆ ಮಾಡಿಸಿದ್ರೆ ಅವರು ಗುಣಮುಖರಾಗೋದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿವೆ.