ಚಿಕ್ಕಬಳ್ಳಾಪುರ: ವೀಕೆಂಡ್ ಲಾಕ್‍ಡೌನ್ ಮಾಡಿದರೂ ವಿಶ್ವವಿಖ್ಯಾತ ನಂದಿಗಿರಿಧಾಮ ದತ್ತ ಪ್ರವಾಸಿಗರ ಆಗಮಿಸುತ್ತಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪ್ರವಾಸಿಗರು ವಾಪಾಸ್ಸಾಗುವಂತಾಗಿದೆ.
Advertisement
ನಂದಿಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಬ್ಯಾರಿಕೇಡ್ ಹಾಕಿ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿದ್ದು, ಬೆಳ್ಳಂ ಬೆಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಆಗಮಿಸುತ್ತಿರುವ ಪ್ರವಾಸಿಗರು ಸುಖಾ ಸುಮ್ಮನೆ ವಾಪಾಸ್ಸಾಗುವಂತಾಗಿದೆ. ದೂರದಿಂದಲೇ ನಂದಿಬೆಟ್ಟ ನೋಡಿ ಫೋಟೋ ಸೆಲ್ಫಿ ತೆಗೆದುಕೊಂಡು ಪ್ರವಾಸಿಗರು ವಾಪಾಸ್ಸಾಗುತ್ತಿದ್ದಾರೆ.
Advertisement
Advertisement
ಕಳೆದ ವೀಕೆಂಡ್ ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದು, ಕೊರೊನಾ ನಿಯಮಗಳನ್ನು ಪ್ರವಾಸಿಗರು ಬ್ರೇಕ್ ಮಾಡಿದರು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವೀಕೆಂಡ್ ನಂದಿಗಿರಿಧಾಮ ಬಂದ್ ಮಾಡಿ ಆದೇಶ ಹೊರಡಿಸಿದೆ. ಇನ್ನೂ ವೀಕ್ ಡೇಸ್ ಸಾಮಾನ್ಯ ದಿನಗಳಲ್ಲಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದೆ. ಸೋಮವಾರದಿಂದ ಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ
Advertisement