ಬೆಂಗಳೂರು: ಭಾರತವನ್ನೇ ತಲ್ಲಣಗೊಳಿಸಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಮಕರು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿ ಗುಪ್ತಾಂಗದಲ್ಲಿ ಬಾಟಲ್ ಹಾಕಿ ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಯುವತಿ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾಳೆ. ಸಂತ್ರಸ್ತ ಯುವತಿಯ ಕಡೆಯವರು ಬಂದು ಅತ್ಯಾಚಾರಿಗಳ ಗ್ಯಾಂಗ್ ಮೇಲೆ ಹಲ್ಲೆ ಮಾಡಿ ಆರೋಪಿಯೊಬ್ಬನ ಕೈ ಮುರಿದಿದ್ದಾರೆ.
ಕಾಮುಕರು ಗಲಾಟೆ ವಿಚಾರವಾಗಿ ದೂರು ಕೊಡಲು ಠಾಣೆಗಳಿಗೆ ಅಲೆಯುತ್ತಾರೆ. ಮೊದಲು ಬಾಣಸವಾಡಿ ನಂತರ ಕೆ.ಆರ್ ಪುರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಎರಡು ಠಾಣೆಯ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಳುಹಿಸಿಕೊಟ್ಟಿದ್ದಾರೆ.
ಆರೋಪಿಗಳಿಂದ ಅಲ್ಲಿಂದ ನೇರವಾಗಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಪೊಲೀಸರು ಯಾವುದೇ ದೂರನ್ನು ದಾಖಲಿಸಿಕೊಳ್ಳದೇ ಘಟನೆಯ ಬಗ್ಗೆ ಪೂರ್ವಪರ ತಿಳಿಯದೇ ಎರಡು ಗ್ಯಾಂಗ್ ಸದಸ್ಯರನ್ನು ಕರೆದು ಮಾತನಾಡಿಸಿ ರಾಜಿ ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು
ಪೊಲೀಸರು ಆರೋಪಿಗಳು ದೂರು ಕೊಡಲು ಬಂದಾಗ ಪೂರ್ವ ಪರ ತಿಳಿದುಕೊಂಡಿದ್ದರೆ ಸರಿ ಹೋಗುತ್ತಿತ್ತು. ಅದರೆ ಪೊಲೀಸರು ಅದನ್ನು ಮಾಡದೇ ಕಳುಹಿಸಿ ಕೊಟ್ಟಿರುವುದು ಮೇಲ್ನೋಟಕ್ಕೆ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸದ್ಯ ಪೊಲೀಸ್ ನಿರ್ಲಕ್ಷ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದ್ದು ತನಿಖೆ ಆರಂಭವಾಗಿದೆ.