ನವದೆಹಲಿ: ಲಾಕ್‍ಡೌನ್‍ನಿಂದಾಗಿ ತವರಿಗೆ ಮರಳಿರುವ ವಲಸೆ ಕಾರ್ಮಿಕರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್‍ಗಾರ್ ಯೋಜನೆ ಜಾರಿಗೆ ತಂದಿದೆ.
ಜೂನ್ 20ರಂದು ಬಿಹಾರದ ಖಗರಿಯಾ ಜಿಲ್ಲೆಯ ಬೆಲ್ದೌರ್ ತಾಲೂಕಿನ ತೆಲಿಹಾರ್ ಗ್ರಾಮದಲ್ಲಿ ಈ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಸೇರಿದಂತೆ ಐದು ರಾಜ್ಯಗಳ ಮುಖ್ಯಮಂತ್ರಿಗಳು, ಕೆಲವು ಕೇಂದ್ರ ಸಚಿವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
#WATCH live from Delhi: FM Nirmala Sitharaman addresses media ahead of launch of 'Garib Kalyan Rojgar Abhiyaan' by PM Modi on 20th June. https://t.co/2928QUhqhT
— ANI (@ANI) June 18, 2020
Advertisement
ಇಂದು ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯೋಜನೆ ವೈಶಿಷ್ಟ್ಯಗಳನ್ನು ವಿವರಿಸಿದರು. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಒಡಿಶಾ, ರಾಜಸ್ಥಾನ, ಜಾರ್ಖಂಡ್ ನ 116 ಜಿಲ್ಲೆಗಳಲ್ಲಿ ತವರಿಗೆ ಮರಳಿದ 25 ಸಾವಿರ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದರು.
Advertisement
Advertisement
ಈ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಯ ಅವಧಿ 125 ದಿನ ಇರಲಿದೆ. ಕಾರ್ಮಿಕರು ಹೊಂದಿರುವ ಕೌಶಲ ಆಧಾರದ ಮೇಲೆ 25 ಬಗೆಯ ಉದ್ಯೋಗ ಒದಗಿಸಲಾಗುತ್ತಿದ್ದು, ಈ ಯೋಜನೆಗೆ 50,000 ಕೋಟಿ ತೆಗೆದಿರಿಸಲಾಗಿದೆ. ರೈಲ್ವೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಒಟ್ಟು 12 ಸಚಿವಾಲಯಗಳ ಸಮನ್ವಯದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
Within 125 days, for 116 districts, nearly 25 schemes of the government will be brought together under #GaribKalyanRojgarAbhiyaan, we will reach saturation levels for each of those schemes within those 125 days: Union Finance Minister Nirmala Sitharaman https://t.co/jB9zSuGTQM pic.twitter.com/8F9M8Naphv
— ANI (@ANI) June 18, 2020