ಬೆಂಗಳೂರು: ಲಾಕ್‍ಡೌನ್ ಸಂದರ್ಭವನ್ನು ಹಲವು ನಟರು ಎಂಜಾಯ್ ಮಾಡುತ್ತಿದ್ದು, ಇನ್ನೂ ಹಲವರು ತಮ್ಮ ಹವ್ಯಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ಬಹುತೇಕ ನಟರು ಫಿಟ್ನೆಸ್‍ನಲ್ಲಿ ಕಾಪಾಡಿಕೊಳ್ಳುವಲ್ಲಿ ಹೆಚ್ಚು ಟೈಂನ್ನು ಮೀಸಲಿಡುತ್ತಿದ್ದಾರೆ. ಜೆಕೆ ಎಂದೇ ಪ್ರಸಿದ್ಧಿ ಪಡೆದಿರುವ ಜಯರಾಮ್ ಕಾರ್ತಿಕ್ ಸಹ ಫಿಟ್ನೆಸ್‍ನಲ್ಲಿ ತೊಡಗಿದ್ದಾರೆ.
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟ ಜಯರಾಮ್ ಕಾರ್ತಿಕ್, ಲಾಕ್‍ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಸಂಪೂರ್ಣ ಸಮಯವನ್ನು ಫಿಟ್ನೆಸ್‍ಗಾಗಿ ಮೀಸಲಿರಿಸಿದ್ದಾರೆ. ಹೌದು, ಜೆಕೆ ದೇಹ ದಂಡನೆಯ ಮಂತ್ರ ಜಮಿಸುತ್ತಿದ್ದು, ಫುಲ್ ಫಿಟ್ ಆಗಿ ಕಾಣುತ್ತಿದ್ದಾರೆ. ಈಗಾಗಲೇ ಹಲವು ನಟ. ನಟಿಯರು ಲಾಕ್‍ಡೌನ್ ಸಮಯವನ್ನು ಫಿಟ್ನೆಸ್ ವ್ಯಾಯಾಮ, ಯೋಗದಂತಹ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದು, ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ದೇಹವನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದಾರೆ.
ಇದೀಗ ಜೆಕೆ ಸಹ ಅದೇ ರೀತಿ ಫುಲ್ ವರ್ಕೌಟ್‍ನಲ್ಲಿ ತೊಡಗಿದ್ದು, ಅದರ ಝಲಕ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋ ಹಂಚಿಕೊಂಡು ಸಾಲುಗಳನ್ನು ಬರೆದಿರುವ ಅವರು, ಫಿಟ್ನೆಸ್ ಎನ್ನುವುದು ಎಕ್ಸಸೈಜ್ ಹೊರತಾಗಿಯೂ ತುಂಬಾ ಇದೆ. ಸಕಾರಾತ್ಮಕ ಬದಲಾವಣೆಗಳಿಗೆ ವೇಗವರ್ಧಕವಿದ್ದಂತೆ. ಅಲ್ಲದೆ ನಿಮ್ಮ ಜೀವನದ ಪ್ರತಿ ಅಂಶದ ಮೇಲೂ ಪರಿಣಾಮ ಬೀರುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಮೆಂಟ್‍ಗಳ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ದಿಸ್ ಗಾಯ್ ಇಸ್ ಲಿಟ್ ಆನ್ ಫೈರ್ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಜೆಕೆ ಫಿಟ್ನೆಸ್ ಮಂತ್ರಕ್ಕೆ ಮಾರು ಹೋಗಿದ್ದಾರೆ.
ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಜೆಕೆ, ಸದ್ಯ ನಾಗಿನಿ-2 ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ನಾಗಿನಿಯ ಜೋಡಿಯಾಗಿ ಆದಿಶೇಷನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಧಾರಾವಾಹಿಗಳ ಚಿತ್ರೀಕರಣ ಸಹ ಸ್ಥಗಿತವಾಗಿದ್ದು, ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಫಿಟ್ನೆಸ್‍ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.