ಬೆಂಗಳೂರು: ವರದಕ್ಷಿಣೆ ದಾಹಕ್ಕಾಗಿ ಕತ್ತರಿಯಿಂದ ಹೆಂಡತಿಯ ಕೊಲೆ ಮಾಡಿದ್ದ ಪಾಪಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಪತಿಯನ್ನು ಯಲಹಂಕದ ಅಳ್ಳಾಲಸಂದ್ರ ನಿವಾಸಿ ಜಾನ್ಸನ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ನಂದಿನಿಯನ್ನು ಕತ್ತರಿಯಿಂದ ಚುಚ್ಚು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಕೇಸ್ ಅನ್ನು ವಿಚಾರಣೆ ಮಾಡುತ್ತಿದ್ದ ಯಲಹಂಕ ಪೊಲೀಸರು ಜಾನ್ಸನ್ ಅನ್ನು ಬಂಧಿಸಿದ್ದಾರೆ.
ಜಾನ್ಸನ್ ಮತ್ತು ನಂದಿನಿ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಸುಂದರವಾಗಿತ್ತು. ಆದರೆ ನಂತರ ಪ್ರತಿದಿನ ಕುಡಿದು ಬರುತ್ತಿದ್ದ ಜಾನ್ಸನ್ ಹೆಂಡತಿ ಬಳಿ ಜಗಳ ಆಡುತ್ತಿದ್ದ. ಆಗಸ್ಟ್ 16ರಂದು ವರದಕ್ಷಿಣೆ ವಿಚಾರಕ್ಕಾಗಿ ಗಲಾಟೆ ಮಾಡಿದ್ದ ಜಾನ್ಸನ್, ಮನೆಯಲ್ಲಿದ್ದ ಕತ್ತರಿಯಿಂದ ಹೆಂಡತಿಯ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದ. ನಂದಿನಿ ತೀವ್ರ ರಕ್ತಸ್ರಾವವಾಗಿ ಸ್ತಳದಲ್ಲೇ ಪ್ರಾಣಬಿಟ್ಟಿದ್ದಳು.
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಜಾನ್ಸನ್‍ನನ್ನು ಇಂದು ಯಲಹಂಕ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.